ನೇತ್ರಾವತಿ ಪೀಕ್ ಗೆ ಮುಗಿಬಿದ್ದ ಪ್ರವಾಸಿಗರು: ಟ್ರಾಫಿಕ್ ಜಾಮ್ ನಿಂದ ಪರದಾಡಿದ ವಾಹನ ಸವಾರರು! - Mahanayaka

ನೇತ್ರಾವತಿ ಪೀಕ್ ಗೆ ಮುಗಿಬಿದ್ದ ಪ್ರವಾಸಿಗರು: ಟ್ರಾಫಿಕ್ ಜಾಮ್ ನಿಂದ ಪರದಾಡಿದ ವಾಹನ ಸವಾರರು!

nethravati
01/10/2023


Provided by

ಚಿಕ್ಕಮಗಳೂರು:  ಕಾಫಿನಾಡ ನೇತ್ರಾವತಿ ಪೀಕ್ ಗೆ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಇದರಿಂದಾಗಿ ಕುದುರೆಮುಖ–ಕಾರ್ಕಳ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು,  ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವಂತಾಗಿದೆ.

ಪ್ರವಾಸಿಗರ ದಟ್ಟಣೆ ಟ್ರಾಫಿಕ್ ಜಾಮ್ ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಪೀಕ್ ಗೆ ಟ್ರಕ್ಕಿಂಗ್ ಗಾಗಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ತುಂತುರು ಮಳೆ ನಡುವೆ ಟ್ರಾಫಿಕ್ ಜಾಮ್ ನಲ್ಲಿ ವಾಹನ ಸವಾರರು ಸಿಲುಕಿದ್ದಾರೆ. ಚಿಕ್ಕಮಗಳೂರು ಹಾಗೂ ಉಡುಪಿ ಗಡಿಭಾಗದಲ್ಲಿ ಈ ನೇತ್ರಾವತಿ ಪೀಕ್ ಇದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಾಲ್ ಗಲ್ ನಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿದೆ.

ಇತ್ತೀಚಿನ ಸುದ್ದಿ