ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ - Mahanayaka

ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

charmadi
01/10/2023

ಕೊಟ್ಟಿಗೆಹಾರ: ಮೂಡಿಗೆರೆ ಅರಣ್ಯ ಇಲಾಖೆಯ ವತಿಯಿಂದ ಚಾರ್ಮಾಡಿ ಘಾಟ್ ಮಲಯ ಮಾರುತದಿಂದ ಗಡಿ ಭಾಗದವರೆಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.


Provided by

ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಚರಣ್ ಕುಮಾರ್ ಮಾತನಾಡಿ ‘ಪ್ರತಿ ವರ್ಷ ಅಕ್ಟೋಬರ್ 1 ರಿಂದ 7ರವರೆಗೆ ವನ್ಯ ಜೀವಿ ಸಪ್ತಾಹವನ್ನು   ಇಲಾಖೆ ವತಿಯಿಂದ ಆಚರಿಸುತ್ತೇವೆ.ಈ ವರ್ಷವೂ ನಮ್ಮ ಎಲ್ಲಾ ಸಿಬ್ಬಂದಿಗಳ ಜೊತೆಗೆ ಚಾರ್ಮಾಡಿ ರಸ್ತೆ ಭಾಗದಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ಕಸಗಳನ್ನು ಹೆಕ್ಕಿ ಸ್ವಚ್ಚತಾ ಆಂದೋಲನ ಮಾಡುತ್ತಿದ್ದೇವೆ.

ಸುಮಾರು 11ಕಿ.ಮೀ ವರೆಗೆ ಎರಡು ತಂಡವಾಗಿ ಸಿಬ್ಬಂದಿಗಳು ಸ್ವಚ್ಚತೆ ಮಾಡುತ್ತಿದ್ದು ಕಸವನ್ನು ಗೋಣಿ ಚೀಲದಲ್ಲಿ ಹಾಕಿ ವಾಹನದ ಮೂಲಕ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ.ಗಾಂಧೀಜಿಯವರ ಸ್ವಚ್ಚ ಭಾರತ ಕನಸು ನನಸು ಮಾಡುವುದು ಇಲಾಖೆಯ ಉದ್ದೇಶವಾಗಿದೆ’ ಎಂದರು.

ಇತ್ತೀಚಿನ ಸುದ್ದಿ