ಗಣೇಶ ಹಬ್ಬದ ವೇಳೆ ಮಾಡಿದ್ರು ಕಳ್ಳತನ: ಮಧ್ಯಪ್ರದೇಶದ ಖತರ್ನಾಕ್ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

ಗಣೇಶ ಚತುರ್ಥಿ ಆಚರಣೆ ವೇಳೆ ಕಳ್ಳತನ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶದ ಮೂವರು ಮಹಿಳೆಯರ ಗುಂಪನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌದಿ ಅರೇಬಿಯಾದ ಮಹಿಳೆಯಿಂದ ಚಿನ್ನ ಕದ್ದ ನಂತರ ಈ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಸತತವಾಗಿ ಕಳ್ಳತನ ಮಾಡಿದ ನಂತರ ಶಂಕಿತರನ್ನು ಬಂಧಿಸಲಾಗಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಗಣೇಶ ಚತುರ್ಥಿ ಸೇರಿದಂತೆ ಹಬ್ಬಗಳ ಸಮಯದಲ್ಲಿ ಅವರ ಕೃತ್ಯಗಳನ್ನು ಬಯಲಿಗೆಳೆಯಲಾಗಿದೆ.
ಬಂಧಿತರನ್ನು ಮಧ್ಯಪ್ರದೇಶದ ರಾಜ್ಗಢ್ ಜಿಲ್ಲೆಯ ಲಕ್ಷ್ಮಿಬಾಯಿ ಸಿಸೋಡಿಯಾ (40), ಅಕ್ಷಿತಾ ಸಿಸೋಡಿಯಾ (22) ಮತ್ತು ರಾನೋ ಭನೇರಿಯಾ (45) ಎಂದು ಗುರುತಿಸಲಾಗಿದೆ. ಈ ಎಲ್ಲಾ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿದೇಶಿಯರ ಬ್ಯಾಗನ್ನು ಕತ್ತರಿಸಲು ಮತ್ತು ಸೌದಿ ರಿಯಾಲ್ ಗಳನ್ನು (ಸೌದಿ ಅರೇಬಿಯಾದ ಕರೆನ್ಸಿ) ಕದಿಯಲು ಬ್ಲೇಡ್ ಬಳಸಿದ ನಂತರ ಈ ಮೂವರನ್ನು ಬಂಧಿಸಲಾಗಿದೆ. ಇವರು ವಿಚಾರಣೆ ವೇಳೆ ಪೊಲೀಸರು ಅವರ ಬಳಿ ವಿದೇಶಿ ಕರೆನ್ಸಿಯನ್ನು ಪತ್ತೆಹಚ್ಚಿದ್ದಾರೆ. ಸಂತ್ರಸ್ತೆ ಸೌದಿ ಅರೇಬಿಯಾದ ಮಹಿಳೆಯಾಗಿದ್ದು, ಹಬ್ಬದ ಅವಧಿಯಲ್ಲಿ ಮುಂಬೈನಲ್ಲಿದ್ದರು. ವಿಗ್ರಹ ವಿಸರ್ಜನೆಗೆ ಒಂದು ದಿನ ಮೊದಲು ಈ ಘಟನೆ ನಡೆದಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಅವರು ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಅವರು ಮತ್ತೊಮ್ಮೆ ಮುಂಬೈಗೆ ಬಂದಿದ್ದರು. ಗುಪ್ತಚರ ಮಾಹಿತಿದಾರರ ಮೂಲಕ ಅವರು ಎಲ್ಲಿದ್ದಾರೆಂದು ನಮಗೆ ತಿಳಿಯಿತು. ನಾವು ಅವರನ್ನು ಲೋಹರ್ ಚಾವ್ಲ್ ಬಳಿ ಬಂಧಿಸಿದ್ದೇವೆ.
ಈ ಮಹಿಳೆಯರು ಖಾಯಂ ಅಪರಾಧಿಗಳಾಗಿದ್ದು, ಓಶಿವಾರಾ ಪೊಲೀಸ್ ಠಾಣೆಯಲ್ಲಿ ಹಳೆಯ ಪ್ರಕರಣದಲ್ಲೂ ಇವರು ಬೇಕಾಗಿದ್ದರು. ಬ್ಯಾಗ್ ತೆರೆದಿದ್ದರೆ ಬ್ಯಾಗ್ ಗಳನ್ನು ಬದಿಯಿಂದ ಸೀಳುವುದು ಅಥವಾ ಪರ್ಸ್ ಗಳನ್ನು ಕಳ್ಳತನ ಮಾಡುವುದು ಅವರ ಕೆಲಸವಾಗಿತ್ತು. ಕೃತ್ಯ ಎಸಗಿ ತಮ್ಮ ಹಳ್ಳಿಗೆ ಹೋಗುತ್ತಿದ್ದರು” ಎಂದು ಮಾಹಿತಿ ನೀಡಿದರು.