ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ: ಓರ್ವನ ಬರ್ಬರ ಹತ್ಯೆ - Mahanayaka
10:00 AM Saturday 23 - August 2025

ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ: ಓರ್ವನ ಬರ್ಬರ ಹತ್ಯೆ

shrinivas
09/10/2023


Provided by

ಬೆಂಗಳೂರು: ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಯುವಕನೋರ್ವನ ಕೊಲೆಯಲ್ಲಿ ಅಂತ್ಯಕಂಡಿದೆ.

ಶ್ರೀನಿವಾಸ್ ಕೊಲೆಯಾದ ಯುವಕ. ಗಣೇಶ ವಿಸರ್ಜನೆ ವೇಳೆ ಇಲ್ಯಾಕೆ ಡ್ಯಾನ್ಸ್ ಮಾಡ್ತೀರಾ ಎಂಬ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ  ಗಲಾಟೆಗೆ ಕಾರಣವಾಗಿದೆ.ಅಲ್ಲದೇ ಲಾಂಗ್ ಮಚ್ಚುಗಳಿಂದ ಹೊಡೆದಾಟ ನಡೆದಿದೆ‌.

ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನೆ  ಸಮಯದಲ್ಲಿ ಡ್ರಾನ್ಸ್ ವಿಚಾರವಾಗಿ ಗಲಾಟೆಯಾಗಿತ್ತು. ಶ್ರೀನಿವಾಸ್ ಕಡೆಯವರಿಗೆ ಇಲ್ಲಿ ನೀವು ಡ್ಯಾನ್ಸ್ ಮಾಡಬೇಡಿ ಅಂತಾ ವಾರ್ನ್ ಮಾಡಿದ್ದರು. ಭಾನುವಾರ ಇವರು ಗಣಪತಿ ಬಿಡುವಾಗ ಶ್ರೀನಿವಾಸ್ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಗಣೇಶ ಬಲಿ ಕೇಳುತ್ತೆ ಎಂದು ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಗಲಾಟೆಯಲ್ಲಿ ಲಾಂಗು ಮಚ್ಚು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಗುಂಪು ಗಲಾಟೆ ಮಾಡಬೇಕು ಅಂತಾ ರೆಡಿಯಾಗಿಯೇ ಬಂದಿತ್ತು. ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಗಲಾಟೆಯಲ್ಲಿ ರಂಜಿತ್ ಎಂಬವನಿಗೂ ಗಂಭೀರ ಗಾಯಗಳಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.

ಇತ್ತೀಚಿನ ಸುದ್ದಿ