ಲಾಡ್ಜ್ ನಲ್ಲಿ ಯುವಕ ಸಾವು ಪ್ರಕರಣ: ಸಾವಿಗೆ ಕಾರಣ ಬಯಲು - Mahanayaka
6:10 AM Thursday 13 - November 2025

ಲಾಡ್ಜ್ ನಲ್ಲಿ ಯುವಕ ಸಾವು ಪ್ರಕರಣ: ಸಾವಿಗೆ ಕಾರಣ ಬಯಲು

thakshith
22/10/2025

ಬೆಂಗಳೂರು: ಪುತ್ತೂರು ಮೂಲದ ಯುವಕ ತಕ್ಷಿತ್ ಮಡಿವಾಳ ಲಾಡ್ಜ್‌ ನಲ್ಲಿ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ.

ವರದಿಗಳ ಪ್ರಕಾರ, ಕಿಡ್ನಿ ವೈಫಲ್ಯ ಮಾತ್ರವಲ್ಲದೇ ಯುವಕ ತಕ್ಷಿತ್‌ಗೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಖಾಯಿಲೆ ಇರೋದು ಕೂಡ ಪತ್ತೆಯಾಗಿದೆ. ಹೀಗಾಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಕ್ಷಿತ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕು ಎಂದೂ ಮಾತನಾಡಿದ್ದರು ಎನ್ನಲಾಗಿದೆ. 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಜೋಡಿ ಬೇರೆ ಬೇರೆ ಲಾಡ್ಜ್ ನಲ್ಲಿ ವಾಸವಿದ್ದರು. 8 ದಿನ ಮಡಿವಾಳದ ಲಾಡ್ಜ್ ಗೆ ಶಿಫ್ಟ್ ಆಗಿದ್ದರು. ಆದರೆ, ಲಾಡ್ಜ್ ನಲ್ಲಿ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.

ಸದ್ಯ ತಕ್ಷಿತ್ ನ  ಜೊತೆಗಿದ್ದ ಯುವತಿಯ ಹೇಳಿಕೆ ಪಡೆದುಕೊಳ್ಳಲಾಗಿದೆ. ತಕ್ಷಿತ್ ತಂದೆ–ತಾಯಿಗೂ ಅಸ್ತಮಾ ಇರೋದು ಪತ್ತೆಯಾಗಿದೆ. ಸದ್ಯ ಪೊಲೀಸರು ಕೆಲ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತ ತಕ್ಷಿತ್ ಡ್ರಿಂಕ್ಸ್ ಹಾಗೂ ಚೈನ್ ಸ್ಮೋಕರ್ ಆಗಿದ್ದ ಎಂದು ವರದಿ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ