ನೀಲಿ ಬಣ್ಣಗಳಿಂದ ಕಂಗೊಳಿಸಿದ ಬ್ರಿಟನ್ ಸಂಸತ್, ಐಫೆಲ್ ಟವರ್: ಇಸ್ರೇಲ್ ಗೆ ಹಲವು ದೇಶಗಳ ಬೆಂಬಲ - Mahanayaka

ನೀಲಿ ಬಣ್ಣಗಳಿಂದ ಕಂಗೊಳಿಸಿದ ಬ್ರಿಟನ್ ಸಂಸತ್, ಐಫೆಲ್ ಟವರ್: ಇಸ್ರೇಲ್ ಗೆ ಹಲವು ದೇಶಗಳ ಬೆಂಬಲ

israel
11/10/2023


Provided by

ಪ್ಯಾರಿಸ್: ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಹಮಾಸ್ ಬಂಡುಕೋರರು ನಡೆಸಿದ ದಾಳಿಯನ್ನು ಹಲವು ದೇಶಗಳು ಖಂಡಿಸಿದ್ದು, ತಕ್ಷಣವೇ ಹಿಂಸಾಚಾರ ನಿಲ್ಲಿಸಿ ಶಾಂತಿ ಸ್ಥಾಪನೆಗೆ ಮುಂದಾಗ ಬೇಕು ಹಾಗೂ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿವೆ.

ಭಾರತ, ಅಮೆರಿಕ, ರಷ್ಯಾ, ಬ್ರಿಟನ್, ಜರ್ಮನಿ, ಸ್ಪೇನ್, ಉಕ್ರೇನ್, ಟರ್ಕಿ ಸೇರಿದಂತೆ ಹಲವು ದೇಶಗಳು ಶಾಂತಿ ಸ್ಥಾಪನೆಗೆ ಒತ್ತಾಯಿಸಿವೆ. ಈ ನಡುವೆ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ ಮೇಲೆ ನೀಲಿ—ಬಿಳಿ ಬಣ್ಣದೊಂದಿಗೆ ಇಸ್ರೇಲ್ ಧ್ವಜವನ್ನ ಮೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲಾಗಿದೆ.

ಇಸ್ರೇಲ್ ಬಾವುಟದ ಜೊತೆಗೆ ರಾಷ್ಟ್ರಗೀತೆಯನ್ನೂ ನುಡಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ನಗರದಲ್ಲಿರುವ ಎಂಪೈರ್ ಸ್ಟೇಟ್ ಕಟ್ಟಡ, ಬ್ರಿಟನ್ ಸಂಸತ್ ಕಟ್ಟಡ, ಲಂಡನ್ ನ 10 ಡೌನಿಂಗ್ ಸ್ಟ್ರೀಟ್ ನಲ್ಲಿರುವ ಸಿಡ್ನಿ ಒಪೇರಾ ಹೌಸ್ ಮತ್ತು ಜರ್ಮನಿಯ ಬ್ರಾಂಡೇನ್ ಬರ್ಗ್ ಗೇಟ್ ನಂತಹ ಐತಿಹಾಸಿಕ ಕಟ್ಟಡಗಳ ಮೇಲೆ ಇಸ್ರೇಲ್ ಧ್ವಜ ಮೂಡಿಸುವ ಮೂಲಕ ಇಸ್ರೇಲ್ ಗೆ ಬೆಂಬಲ ವ್ಯಕ್ತಪಡಿಸಲಾಗಿದೆ.

ಇತ್ತೀಚಿನ ಸುದ್ದಿ