ಬುದ್ಧನ ಜೆಡ್ಡು ಕುಂದಾಪುರ: " ಬುದ್ಧನೆಡೆಗೆ ನಮ್ಮ ನಡಿಗೆ " ಬುದ್ಧ ವಂದನಾ ಕಾರ್ಯಕ್ರಮ - Mahanayaka

ಬುದ್ಧನ ಜೆಡ್ಡು ಕುಂದಾಪುರ: ” ಬುದ್ಧನೆಡೆಗೆ ನಮ್ಮ ನಡಿಗೆ ” ಬುದ್ಧ ವಂದನಾ ಕಾರ್ಯಕ್ರಮ

buddhas jeddu
15/10/2023


Provided by

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ  ಜಿಲ್ಲಾ ಸಮಿತಿ ಉಡುಪಿ, ಬುದ್ಧನ ಜೆಡ್ಡು ಬುದ್ಧವಿಹಾರ  ಪ್ರತಿಷ್ಠಾನ  (ರಿ.) ಕರ್ಕುಂಜೆ-ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ  ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರು  ಬೌದ್ಧ ಧರ್ಮಕ್ಕೆ ಮರಳಿದ ಅ. 14ರ ಕ್ರಾಂತಿಕಾರಿ ದಿನವನ್ನು ” ಬುದ್ಧನೆಡೆಗೆ ನಮ್ಮ ನಡಿಗೆ ”  ಶೀರ್ಷಿಕೆ ಯಡಿಯಲ್ಲಿ ಕುಂದಾಪುರ ತಾಲೂಕಿನ ನೇರಳೆ ಕಟ್ಟೆ ಸಮೀಪದ ಕರ್ಕುಂಜೆ  ಗ್ರಾಮದ ಬೌದ್ಧರ ಐತಿಹಾಸಿಕ ಕುರುಹುಗಲಿರುವ ಬುದ್ಧನ ಜೆಡ್ಡು ಪ್ರದೇಶದಲ್ಲಿ  ಬುದ್ಧ ವಂದನಾ ಕಾರ್ಯಕ್ರಮ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬುದ್ಧನ ಜಡ್ಡು ಬುದ್ಧವಿಹಾರ  ಪ್ರತಿಷ್ಠಾನ  (ರಿ.) ಇದರ ಗೌರವಾಧ್ಯಕ್ಷ ಉದಯ್ ಕುಮಾರ್ ತಲ್ಲೂರ್ ಮಾತನಾಡಿದರು.

ಬೌದ್ಧ ಉಪಾಸಕರಾದ ಮಂಜುನಾಥ್ ಜಿ. ಉಪಾಸನೆ ಗೈದರು. ಕಾರ್ಯಕ್ರಮದಲ್ಲಿ ಬುದ್ಧನ ಜಡ್ಡು ಬುದ್ಧವಿಹಾರ  ಪ್ರತಿಷ್ಠಾನ  (ರಿ.) ಇದರ ಗೌರವಾಧ್ಯಕ್ಷ ಉದಯ್ ಕುಮಾರ್ ತಲ್ಲೂರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮ ಘರ್ಜನೆಯ ಜಿಲ್ಲಾ ಸಂಚಾಲಕರಾದ ಚಂದ್ರ ಅಳ್ತಾರ್,  ಕಾರ್ಕಳ ತಾಲೂಕು ಸಂಚಾಲಕರಾದ ಸುರೇಂದ್ರ ಬಜಗೋಳಿ ಮುಖಂಡರಾದ ರಘು ಶಿರೂರು, ಶಶಿ ಬಳ್ಕೂರು, ರಾಘವೇಂದ್ರ ಶಿರೂರು, ರಾಮ ಬೆಲ್ಲಾಳ, ಚಂದ್ರಮ ತಲ್ಲೂರ್, ಪ್ರಶಾಂತ್ ಉಡುಪಿ, ಅಣ್ಣಪ್ಪ ಪಾಡಿಗಾರ, ಸಂಜೀವ ಪಳ್ಳಿ, ಶೇಖರ್ ಆರ್ಡಿ, ಕೃಷ್ಣ ಅಲ್ತಾರ್, ಸಂದೇಶ ಬ್ರಹ್ಮಾವರ, ಸತ್ಯನಾರಾಯಣ ಬೆಲ್ಲಾಳ, ವಸಂತ ವಂಡ್ಸೆ, ಕೃಷ್ಣಿ ಬೆಲ್ಲಾಳ, ಚಂದ್ರಿಕಾ ಬೆಲ್ಲಾಳ, ಸಂಗೀತ ನಾಡ, ರತ್ನ ಬೆಲ್ಲಾಳ  ಸೇರಿದಂತೆ ಸಂಘಟನೆಯ ಹಾಗೂ ಪ್ರತಿಷ್ಠಾನದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ