ಪಾಕ್ ಆಟಗಾರನನ್ನು ನೋಡಿ 'ಜೈ ಶ್ರೀರಾಮ್' ಘೋಷಣೆ ಮಾಡಿದ್ದು ಸರಿಯಲ್ಲ: ಉದಯನಿಧಿ ಸ್ಟಾಲಿನ್ ಕಿಡಿ - Mahanayaka

ಪಾಕ್ ಆಟಗಾರನನ್ನು ನೋಡಿ ‘ಜೈ ಶ್ರೀರಾಮ್’ ಘೋಷಣೆ ಮಾಡಿದ್ದು ಸರಿಯಲ್ಲ: ಉದಯನಿಧಿ ಸ್ಟಾಲಿನ್ ಕಿಡಿ

15/10/2023


Provided by

ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನ ಡ್ರೆಸ್ಸಿಂಗ್ ರೂಮ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರೇಕ್ಷಕರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ ವೀಡಿಯೊಗಳು ಹೊರಬಂದ ನಂತರ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅಭಿಮಾನಿಗಳ ನಡವಳಿಕೆಯನ್ನು “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.

“ಭಾರತವು ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ, ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಸ್ವೀಕಾರಾರ್ಹವಲ್ಲ. ಕ್ರೀಡೆಯು ದೇಶಗಳ ನಡುವೆ ಒಂದುಗೂಡಿಸುವ ಶಕ್ತಿಯಾಗಿರಬೇಕು. ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷವನ್ನು ಹರಡಲು ಅದನ್ನು ಸಾಧನವಾಗಿ ಬಳಸುವುದು ಖಂಡನೀಯ” ಎಂದಿದ್ದಾರೆ.

ಪಾಕಿಸ್ತಾನದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ 69 ಎಸೆತಗಳಲ್ಲಿ 49 ರನ್ ಗಳಿಸಿದ ಔಟಾದ ನಂತರ ಡ್ರೆಸ್ಸಿಂಗ್ ರೂಮ್ ಗೆ ಹಿಂದಿರುಗುತ್ತಿದ್ದಾಗ ಪ್ರೇಕ್ಷಕರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಇನ್ನು ಈ ಕುರಿತು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಕ್ರಿಕೆಟ್ ಅಭಿಮಾನಿಗಳ “ಅಸಂಬದ್ಧ ನಡವಳಿಕೆ” ಎಂದು ಕರೆದ್ರೆ ಪ್ಯಾಡಿ ಎಂಬ ಫೇಸ್ ಬುಕ್ ಬಳಕೆದಾರರು “ಮುಂದಿನ 10 ದಿನಗಳಲ್ಲಿ ಪಾಕಿಸ್ತಾನವು ಚೆನ್ನೈನಲ್ಲಿ 2 ಪಂದ್ಯಗಳನ್ನು ಆಡಲಿದೆ. ಚೆಪಾಕ್ ಗೆ ಯಾರೇ ಹೋದರೂ, ಅವರನ್ನು ಅಪಾರ ಪ್ರೀತಿಯಿಂದ ಸ್ವಾಗತಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅವರು ಯಾರು ಮತ್ತು ಅವರು ಏನು ಮಾಡುತ್ತಿದ್ದಾರೆ ಎಂದು ಪ್ರತಿಯೊಬ್ಬರನ್ನು ಗೌರವಿಸಿ” ಎಂದು ಬರೆದಿದ್ದಾರೆ.

ಇತ್ತೀಚಿನ ಸುದ್ದಿ