ಗಗನಯಾನ ಯೋಜನೆ: ಮಾನವ ರಹಿತ ಉಡಾವಣೆ ಸ್ಥಗಿತ; ಇದಕ್ಕೆ ಕಾರಣ ಏನ್ ಗೊತ್ತಾ..? - Mahanayaka

ಗಗನಯಾನ ಯೋಜನೆ: ಮಾನವ ರಹಿತ ಉಡಾವಣೆ ಸ್ಥಗಿತ; ಇದಕ್ಕೆ ಕಾರಣ ಏನ್ ಗೊತ್ತಾ..?

21/10/2023


Provided by

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆಯ ಭಾಗವಾಗಿ ಇಂದು ಇಸ್ರೋ ಮಾನವ ರಹಿತ ಪರಿಕ್ಷಾರ್ಥ ವಾಹಕವನ್ನು ಉಡಾವಣೆಗೊಳಿಸಲು ಸಜ್ಜಾಗಿತ್ತು. ಆದರೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕ ಉಡಾವಣಾ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.

ಇಂದು ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ  ಕೇಂದ್ರದಿಂದ TV-D1 ಮಾನವರಹಿತ ಪರಿಕ್ಷಾರ್ಥ ವಾಹಕ ಉಡಾವಣಾ ಕೇಂದ್ರದಿಂದ ನಭಕ್ಕೆ ಹಾರಲು ಸಜ್ಜಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಗಗನಯಾನ ಯೋಜನೆಯ ಮೊದಲ ಪರೀಕ್ಷೆ ಇಂದು ನಡೆಯಲು ಸಜ್ಜಾಗಿತ್ತು. ಉಡಾವಣಾ ಸಮಯದಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆ ಲಾಂಚ್‌ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಅಕ್ಟೋಬರ್‌ 21 ರ ಬೆಳಿಗ್ಗೆ 8.30 ರ ಸುಮಾರಿಗೆ ಉಡಾವಣೆಯ ಎಲ್ಲಾ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆ ಪರೀಕ್ಷಾರ್ಥ ಉಡಾವನೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ವಿಜ್ಞಾನಿಗಳು ಸಮಸ್ಯೆಯನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ.

ಸದ್ಯ ರಾಕೆಟ್‌ ಉತ್ತಮ ಸ್ಥಿತಿಯಲ್ಲಿದ್ದು ಲಾಂಚ್‌ ಸಮಯದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್‌ ಸೋಮನಾಥ್‌ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ