ಸಿಐಎಸ್ ಎಫ್ ಭದ್ರತಾ ಸಿಬ್ಬಂದಿ ಝಾಕಿರ್ ಹುಸೈನ್ ಗುಂಡು ಹಾರಿಸಿಕೊಂಡು ಸಾವಿಗೆ ಶರಣು!

22/10/2023
ಮಂಗಳೂರು: ಸಿಐಎಸ್ ಎಫ್ ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಪಣಂಬೂರಿನಲ್ಲಿರುವ ಎನ್.ಎಂ.ಪಿ.ಎ. ಮುಖ್ಯ ದ್ವಾರದ ಬಳಿ ನಡೆದಿದೆ.
ಮೃತರನ್ನು ರಾಯಚೂರು ನಿವಾಸಿ, ಸಿಐಎಸ್ ಎಫ್ ಸಬ್ ಇನ್ ಸ್ಪೆಕ್ಟರ್ ಝಾಕಿರ್ ಹುಸೈನ್(54) ಎಂದು ಗುರುತಿಸಲಾಗಿದೆ. ಇವರು ನವ ಮಂಗಳೂರು ಬಂದರ್ ನ ಮುಖ್ಯ ದ್ವಾರದಲ್ಲಿ ರಾತ್ರಿ ಪಾಳಿಯ ಕೆಲಸ ನಿರ್ವಹಿಸಿದ್ದರು.
ಇಂದು ಬೆಳಗ್ಗೆ ತನ್ನ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.