ಹುಲಿ ಉಗುರಿನ ಶೋಕಿ: ಇಬ್ಬರು ಅರ್ಚಕರು ಅರೆಸ್ಟ್: 3 ಹುಲಿ ಉಗುರಿನ ಲಾಕೆಟ್ ವಶಕ್ಕೆ

26/10/2023
ಚಿಕ್ಕಮಗಳೂರು: ಹುಲಿ ಉಗುರಿನ ಲಾಕೆಟ್ ಧರಿಸಿ ಶೋಕಿ ಮಾಡುತ್ತಿದ್ದ ಇಬ್ಬರು ಅರ್ಚಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಇಲ್ಲಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಹುಲಿ ಉಗುರಿನಿಂದ ತಯಾರಿಸಲ್ಪಟ್ಟ ಮೂರು ಲಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಚಕರು ಹುಲಿ ಉಗುರಿನ ಲಾಕೆಟ್ ಹೊಂದಿರುವುದಾಗಿ ಅರಣ್ಯಾಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರು ಬಂದಿತ್ತು. ಈ ದೂರಿನನ್ವಯ ಅರಣ್ಯಾಧಿಕಾರಿಗಳು ಇಬ್ಬರ ಮನೆಗೂ ದಾಳಿ ನಡೆಸಿದ್ದು, ಈ ವೇಳೆ ಮೂರು ಲಾಕೆಟ್ ಗಳು ದೊರೆತಿವೆ. ಇದೀಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.