ಕ್ರಿಕೆಟಿಗ ಧೋನಿ ಹೆಸರು ಹೇಳಿ ಅಪರಿಚಿತರ ಕಳ್ಳಾಟ: ತಾಯಿಗೆ ವಂಚಿಸಿ ಮಗುವನ್ನು ಅಪಹರಿಸಿ ಬೈಕ್‌ನಲ್ಲಿ ಎಸ್ಕೇಪ್..! ಏನಿದು 'ಧೋನಿ' ಕಿಡ್ನಾಪ್..? - Mahanayaka

ಕ್ರಿಕೆಟಿಗ ಧೋನಿ ಹೆಸರು ಹೇಳಿ ಅಪರಿಚಿತರ ಕಳ್ಳಾಟ: ತಾಯಿಗೆ ವಂಚಿಸಿ ಮಗುವನ್ನು ಅಪಹರಿಸಿ ಬೈಕ್‌ನಲ್ಲಿ ಎಸ್ಕೇಪ್..! ಏನಿದು ‘ಧೋನಿ’ ಕಿಡ್ನಾಪ್..?

27/10/2023


Provided by

ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಳಸಿಕೊಂಡು ತಾಯಿಯನ್ನು ವಂಚಿಸಿ ಮಗುವನ್ನು ಅಪಹರಿಸಿದ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಅಪಹರಣಕಾರರು ಮಗುವಿನ ತಾಯಿಗೆ ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ವಿತರಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಮಧು ದೇವಿ ತನ್ನ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಬೈಕ್‌ನಲ್ಲಿ ಬಂದ ಪುರುಷ ಮತ್ತು ಮಹಿಳೆಯು ಧೋನಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಿದ್ದಾರೆ ಎಂದು ಹೇಳಿ ಅವಳನ್ನು ಮೋಡಿ ಮಾಡಿದ್ದಾರೆ. ಅಲ್ಲದೇ ಹಣ ವಿತರಣೆ ನಡೆಯುತ್ತಿರುವ ಸ್ಥಳಕ್ಕೆ ಕರೆದೊಯ್ಯಬಹುದೇ ಎಂದು ಮಹಿಖೆ ಕೇಳಿದರು. ಇದಕ್ಕೆ ಒಪ್ಪಿದ ಬೈಕ್ ಸವಾರರು, ಮಧು ಮತ್ತು ಆಕೆಯ ಒಂದೂವರೆ ವರ್ಷದ ಮಗಳನ್ನು ತಮ್ಮೊಂದಿಗೆ ಕರೆದೊಯ್ದರೆ, ಆಕೆಯ ಎಂಟು ವರ್ಷದ ಮಗಳನ್ನು ಆಹಾರ ಮಳಿಗೆಯಲ್ಲಿ ಬಿಟ್ಟು ಹೋಗಿದ್ದರು.

ಹರ್ಮುವಿನ ವಿದ್ಯುತ್ ಕಚೇರಿಯನ್ನು ತಲುಪಿದ ನಂತರ ಬೈಕ್ ಸವಾರರು ಮಧುಗೆ ಹಣ ವಿತರಣೆಗೆ ಸಂಬಂಧಿಸಿದಂತೆ ಸಭೆ ನಡೆಯುತ್ತಿದೆ ಎಂದು ಹೇಳಿದರು. ಅಲ್ಲದೇ ಚಾಲಾಕಿತನದಿಂದ ಮಹಿಳೆಯ ಗಮನವನ್ನು ಬೇರೆಡೆಗೆ ತಿರುಗಿಸಿ ಅಪಹರಣಕಾರರು ಆಕೆಯ ಚಿಕ್ಕ ಮಗಳನ್ನು ಅಪಹರಿಸಿ ತಮ್ಮ ಬೈಕನ್ನು ವೇಗವಾಗಿ ಓಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆ ಮಧು ಅವರನ್ನು ಬೆನ್ನಟ್ಟಲು ಪ್ರಯತ್ನಿಸಿದರೂ ಬೈಕ್ ಸವಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ ಮಗಹಿಳೆ ಮಧು ಅವರ ಹೇಳಿಕೆಗಳಲ್ಲಿ ಅಸ್ಪಷ್ಟತೆ ಇದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಕೆಂದರೆ ಆರಂಭದಲ್ಲಿ ಅಪಹರಣಕಾರರು ಬಡವರಿಗಾಗಿ ಸರ್ಕಾರಿ ಯೋಜನೆಯ ಬಗ್ಗೆ ಹೇಳಿದ್ದರು ಎಂದು ಅವರು ಹೇಳಿಕೊಂಡರು. ಆದರೆ ತದನಂತರ ಅವರು ಧೋನಿಯ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ