ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್! - Mahanayaka
3:10 AM Thursday 23 - October 2025

ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್!

shakhadri
27/10/2023


ಚಿಕ್ಕಮಗಳೂರು:  ರಾಜ್ಯದಲ್ಲಿ ಹುಲಿ ಉಗುರು-ಚರ್ಮದ ಕಂಟಕ ಚಿತ್ರ ನಟರ ಬಳಿಕ ಧಾರ್ಮಿಕ ಮುಖಂಡರನ್ನೂ ಕಾಡುತ್ತಿದೆ. ಇತ್ತೀಚೆಗಷ್ಟೇ  ಹುಲಿ ಚರ್ಮ ಹೊಂದಿರುವ ಬಗ್ಗೆ ವಿನಯ್ ಗುರೂಜಿಯ ಹೆಸರು ವ್ಯಾಪಕವಾಗಿ ಕೇಳಿ ಬಂದಿತ್ತು. ಆದ್ರೆ, ಆ ಹುಲಿ ಚರ್ಮವನ್ನ ಸರ್ಕಾರಕ್ಕೆ ಹಸ್ತಾಂತರಿಸಿರೋದಾಗಿ ಅವರು ಸ್ಪಷ್ಟನೆ ನೀಡಿದ್ದರು. ಇದೀಗ  ಮತ್ತೊಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರಿನ ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿದೆ. ಶಾಖಾದ್ರಿ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಶ್ರೀರಾಮಸೇನೆ ಜಿಲ್ಲಾ ಘಟಕ ಮುಂದಾಗಿದೆ.

ದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರೋ ಶಾಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ. ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲುವಂತೆ ಡಿ.ಎಫ್.ಓ.ಗೆ ಶ್ರೀರಾಮಸೇನೆ ಮನವಿ ನೀಡಲಿದೆ.

ಇತ್ತೀಚಿನ ಸುದ್ದಿ