ಹೃದಯಾಘಾತ: ವಾಲ್ಮೀಕಿ ಜಯಂತಿ ಪ್ರಾರ್ಥನೆ ವೇಳೆ ವಿಚಾರಣಾಧೀನ ಕೈದಿ ಸಾವು - Mahanayaka

ಹೃದಯಾಘಾತ: ವಾಲ್ಮೀಕಿ ಜಯಂತಿ ಪ್ರಾರ್ಥನೆ ವೇಳೆ ವಿಚಾರಣಾಧೀನ ಕೈದಿ ಸಾವು

jayaprakash
28/10/2023


Provided by

ಚಾಮರಾಜನಗರ: ವಿಚಾರಣಾಧೀನ ಕೈದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಉಪಕಾರಗೃಹದಲ್ಲಿ ನಡೆದಿದೆ.

ಕೇರಳ ಮೂಲದ ಜಯಪ್ರಕಾಶ್ ಅಲಿಯಾಸ್ ಪ್ರಕಾಶ್(32) ಮೃತ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ.

ವಾಲ್ಮೀಕಿ ಜಯಂತಿಯ ಅಂಗವಾಗಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಜಯಪ್ರಕಾಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಿಮ್ಸ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತು. ಆದ್ರೆ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಬೇಗೂರು ಠಾಣಾ ವ್ಯಾಪ್ತಿಯಲ್ಲಿ ರೋಡ್ ರಾಬರಿ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಜಯಪ್ರಕಾಶ್ ವಿಚಾರಣಾಧೀನ ಕೈದಿಯಾಗಿದ್ದರು. ಇತ್ತೀಚೆಗೆ ಕಾರು ಅಡ್ಡಗಟ್ಟಿ 45 ಲಕ್ಷ ರೂಪಾಯಿ ದರೋಡೆ ಪ್ರಕರಣದಲ್ಲಿ ಜಯಪ್ರಕಾಶ್ ಬಂಧಿತರಾಗಿದ್ದರು.

ಇತ್ತೀಚಿನ ಸುದ್ದಿ