ಕೇರಳ ಸರಣಿ ಬಾಂಬ್ ಸ್ಫೋಟ: ಸಂತ್ರಸ್ತರಿಗೆ ಮಾನಸಿಕ ಆರೋಗ್ಯ ನೆರವಿನ ಭರವಸೆ - Mahanayaka

ಕೇರಳ ಸರಣಿ ಬಾಂಬ್ ಸ್ಫೋಟ: ಸಂತ್ರಸ್ತರಿಗೆ ಮಾನಸಿಕ ಆರೋಗ್ಯ ನೆರವಿನ ಭರವಸೆ

31/10/2023


Provided by

ಕೇರಳ ಕಲಮಸ್ಸೆರಿ ಸ್ಫೋಟದ ಸಂತ್ರಸ್ತರಿಗೆ ಮಾನಸಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡಲು ಮಾನಸಿಕ ಆರೋಗ್ಯ ತಂಡವನ್ನು ರಚಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಘೋಷಿಸಿದ್ದಾರೆ.

ಸ್ಫೋಟದ ಸಮಯದಲ್ಲಿ ಹಾಜರಿದ್ದ ಎಲ್ಲರಿಗೂ ಎರ್ನಾಕುಲಂ, ಕೊಟ್ಟಾಯಂ, ಇಡುಕ್ಕಿ, ಅಲಪ್ಪುಳ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಾನಸಿಕ ಬೆಂಬಲ ನೀಡಲಾಗುವುದು ಅವರು ಎಂದಿದ್ದಾರೆ.

ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಟೆಲಿ ಮಾನಸ್ ಮೂಲಕ ಮಾನಸಿಕ ಬೆಂಬಲ ಮತ್ತು ಸಮಾಲೋಚನೆಗೆ ಅನುಕೂಲ ಕಲ್ಪಿಸಲಾಗುವುದು ಎಂದು ಜಾರ್ಜ್ ಹೇಳಿದರು. ಸಣ್ಣಪುಟ್ಟ ಗಾಯಗಳಿರುವವರು ಮತ್ತು ಇತರರಿಗೆ ಭಾವನಾತ್ಮಕ ನೆರವು ಫೋನಿನ ಮೂಲಕ ಲಭ್ಯವಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ನೇರ ಸೇವೆಗಳನ್ನು ಒದಗಿಸಲಾಗುವುದು.

ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆಯಾ ವೈದ್ಯಕೀಯ ಸೌಲಭ್ಯಗಳಿಂದ ಬೆಂಬಲವನ್ನು ಪಡೆಯುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ