ಬಿಜೆಪಿಯವ್ರು 12,000 ಕೊಟ್ರೆ ನಾವು ಮಹಿಳೆಯರಿಗೆ 15,000 ಕೊಡ್ತೇವೆ ಎಂದ ಕಾಂಗ್ರೆಸ್: ಛತ್ತೀಸ್‌ಗಢದಲ್ಲಿ ನಾರಿಯರಿಗೆ ಬಂಪರ್ ಕೊಡುಗೆ ಘೋಷಿಸಿದ ಕೈ ಪಡೆ

ಮುಂದಿನ ವಾರದಲ್ಲಿ ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ಪ್ರಚಾರದ ಹಂತದ ಕೊನೆಯಲ್ಲಿ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ 15,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದೆ.
ಈ ಮೊದಲು ಇಲ್ಲಿ ಬಿಜೆಪಿ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂಪಾಯಿ ನೀಡುವ ಭರವಸೆ ನೀಡಿತ್ತು. ಈಗ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ 15 ಸಾವಿರ ರೂಪಾಯಿ ಘೋಷಣೆ ಮಾಡಿದೆ.
ಬಘೇಲ್ ರಾಯ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ದೀಪಾವಳಿ ಸಂದರ್ಭದಲ್ಲಿ ‘ಮಾ ಲಕ್ಷ್ಮಿ ಜಿ’ ಮತ್ತು ಛತ್ತೀಸ್‌ಗಢ ‘ಮಹತಾರಿಯ’ ಆಶೀರ್ವಾದದೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮಹಿಳೆಯರಿಗೆ ವಾರ್ಷಿಕ 15 ಸಾವಿರ ರೂಪಾಯಿ ಸಹಾಯಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ‘ಛತ್ತೀಸ್‌ಗಢ ಗೃಹ ಲಕ್ಷ್ಮಿ ಯೋಜನೆ’ ಅಡಿಯಲ್ಲಿ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.