ವಿಶ್ವಕಪ್ ಫೈನಲ್ ವೇಳೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಫೆಲೆಸ್ತೀನ್ ಬೆಂಬಲಿಗ: 'ಫ್ರೀ ಫೆಲೆಸ್ತೀನ್' ಟೀ ಶರ್ಟ್ ಧರಿಸಿ ಬಂದ ಆ ಯುವಕ ಯಾರು..? - Mahanayaka
6:50 AM Wednesday 20 - August 2025

ವಿಶ್ವಕಪ್ ಫೈನಲ್ ವೇಳೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಫೆಲೆಸ್ತೀನ್ ಬೆಂಬಲಿಗ: ‘ಫ್ರೀ ಫೆಲೆಸ್ತೀನ್’ ಟೀ ಶರ್ಟ್ ಧರಿಸಿ ಬಂದ ಆ ಯುವಕ ಯಾರು..?

19/11/2023


Provided by

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಫೈನಲ್ ಪಂದ್ಯದ ವೇಳೆ ‘ಫ್ರೀ ಫೆಲೆಸ್ತೀನ್’ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಪಿಚ್ ಗೆ ನುಗ್ಗಿದ ಘಟನೆ ನಡೆದಿದೆ. ಅಲ್ಲದೇ ಆ ಯುವಕ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಕೆಂಪು ಶಾರ್ಟ್ಸ್ ಧರಿಸಿದ್ದ ವ್ಯಕ್ತಿಯ ಮುಂಭಾಗದಲ್ಲಿ ‘ಫೆಲೆಸ್ತೀನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿ’ ಮತ್ತು ಹಿಂಭಾಗದಲ್ಲಿ ‘ಫ್ರೀ ಫೆಲೆಸ್ತೀನ್’ ಎಂಬ ಸಂದೇಶವನ್ನು ಹೊಂದಿರುವ ಬಿಳಿ ಟೀ ಶರ್ಟ್ ಧರಿಸಿದ್ದರು. ಅವರು ಫೆಲೆಸ್ತೀನ್ ಬಣ್ಣಗಳಲ್ಲಿ ಫೇಸ್ ಮಾಸ್ಕ್ ಧರಿಸಿದ್ದರು.

ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಝಾ ಮೇಲೆ ವೈಮಾನಿಕ ಮತ್ತು ನೆಲದ ದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಫೆಲೆಸ್ತೀನ್ ವಿರುದ್ಧದ ಹಿಂಸಾಚಾರ, ವಿಶೇಷವಾಗಿ ನಾಗರಿಕರು ಬಲಿಪಶುಗಳಾಗುತ್ತಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಹಮದಾಬಾದ್ ನ ಪಿಚ್ ಗೆ ನುಗ್ಗಿದ ವ್ಯಕ್ತಿಯು ಧ್ವಜವನ್ನು ಸಹ ಹಿಡಿದಿದ್ದ. ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅಲ್ಲದೇ ಯುವಕನನ್ನು ಚಾಂದ್ಖೇಡಾ ಪೊಲೀಸ್ ಠಾಣೆಗೆ ಕರೆತರಲಾಯಿತು.

ಆ ವ್ಯಕ್ತಿ ತನ್ನನ್ನು ಜಾನ್ಸನ್ ವೇಯ್ನ್ ಎಂದು ಪರಿಚಯಿಸಿಕೊಂಡಿದ್ದಾನೆ. “ನಾನು ಆಸ್ಟ್ರೇಲಿಯಾದಿಂದ ಬಂದವನು. ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ನಾನು ಮೈದಾನಕ್ಕೆ ಪ್ರವೇಶಿಸಿದೆ. ಈ ಪ್ರತಿಭಟನೆಯು ಫೆಲೆಸ್ತೀನ್ ಯುದ್ಧದ ವಿರುದ್ಧವಾಗಿತ್ತು” ಎಂದು ಪೊಲೀಸರು ಕರೆದೊಯ್ಯುವಾಗ ಯುವಕ ಸುದ್ದಿಗಾರರಿಗೆ ತಿಳಿಸಿದ್ದಾನೆ.
ಈತ ಪಿಚ್ ಗೆ ಓಡಿ ಬಂದಿದ್ದರಿಂರ ಪಂದ್ಯವನ್ನು ತಕ್ಷಣ ನಿಲ್ಲಿಸಲಾಯಿತು. ಭದ್ರತಾ ಅಧಿಕಾರಿಗಳು ಈತನನ್ನು ಬಂಧಿಸಿದ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು.

ಇತ್ತೀಚಿನ ಸುದ್ದಿ