ಬೇಸರದಲ್ಲಿದ್ದ ವಿರಾಟ್‌ ಕೊಹ್ಲಿಯನ್ನು ಬಿಗಿದಪ್ಪಿ ಸಂತೈಸಿಸಿದ ಮ್ಯಾಕ್ಸ್‌ʼವೆಲ್‌ - Mahanayaka

ಬೇಸರದಲ್ಲಿದ್ದ ವಿರಾಟ್‌ ಕೊಹ್ಲಿಯನ್ನು ಬಿಗಿದಪ್ಪಿ ಸಂತೈಸಿಸಿದ ಮ್ಯಾಕ್ಸ್‌ʼವೆಲ್‌

respect
20/11/2023

ವಿಶ್ವಕಪ್‌ ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದ ಬಳಿಕ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ ವೆಲ್‌ ಅವರು  ವಿರಾಟ್‌ ಕೊಹ್ಲಿಯನ್ನು ಬಿಗಿದಪ್ಪಿ ಸಂತೈಸಿಸಿರುವುದು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಫೋಟೋವನ್ನು ಐಸಿಸಿ ಟ್ವೀಟ್‌ ಮಾಡಿದ್ದು, ಗೌರವ ಮತ್ತು ಅಭಿಮಾನ ಎಂದು ಕ್ಯಾಪ್ಷನ್‌ ನೀಡಿದೆ.

ವಿಶ್ವಕಪ್‌ ಮ್ಯಾಚ್‌ ಸೋತ ಬೇಸರದಲ್ಲಿದ್ದ ವಿರಾಟ್‌ ಕೊಹ್ಲಿಯನ್ನು ಮ್ಯಾಕ್ಸ್‌ ವೆಲ್‌ ಬಿಗಿದಪ್ಪಿ ಸಂತೈಸಿಸಿದರಲ್ಲದೇ ಜರ್ಸಿಗೆ ವಿರಾಟ್‌ ಅವರಿಂದ ಹಸ್ತಾಕ್ಷರ ಬರೆಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಪ್ರತಿ ಮ್ಯಾಚ್‌ ನಲ್ಲೂ ಉತ್ತಮ ಕ್ಷೇತ್ರ ರಕ್ಷಣೆಯಿಂದ ಎದುರಾಳಿ ತಂಡವನ್ನು ಕಟ್ಟಿ ಹಾಕುತ್ತದೆ. ವಿಶ್ವಕಪ್‌ –2023ಯಲ್ಲಿಯೂ ಭಾರತದ ವಿರುದ್ಧ ಇದೇ ತಂತ್ರವನ್ನು ಬಳಸಿತು.

ಆರಂಭದಿಂದಲೂ ಉತ್ತಮ ಕ್ಷೇತ್ರ ರಕ್ಷಣೆಯನ್ನು ಕಾಯ್ದುಕೊಂಡ ಆಸ್ಟ್ರೇಲಿಯಾ, ಟೀಂ ಇಂಡಿಯಾಗೆ ಹೆಚ್ಚಿನ ರನ್‌ ಗಳಿಸಲು ಸಾಧ್ಯವಾಗದಂತೆ ಕಟ್ಟಿ ಹಾಕಿತು. ಆದರೆ ಟೀಂ ಇಂಡಿಯಾ ಉತ್ತಮ ಕ್ಷೇತ್ರ ರಕ್ಷಣೆಗೆ ವಿಫಲವಾಯಿತು. ಇದು ಮ್ಯಾಚ್‌ ಸೋಲಲು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ.

ಸೋಲಿನ ಬಳಿಕ ಮೈದಾನದಲ್ಲಿ  ಟೀಂ ಇಂಡಿಯಾ ಆಟಗಾರರು ಭಾವುಕರಾದರು. ಇಡೀ ವಿಶ್ವಕಪ್‌ ನಲ್ಲಿ ಒಂದೇ ಒಂದು ಮ್ಯಾಚ್‌ ಸೋಲದೇ ಮುನ್ನುಗ್ಗಿದ್ದ ತಂಡ ಫೈನಲ್‌ ನಲ್ಲಿ ಸೋತಿರುವುದು ಅರಗಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಆದರೆ ವಿಶ್ವಕಪ್‌ ನಲ್ಲಿ ಭಾರತ ಇಡೀ ವಿಶ್ವವನ್ನೇ ಗಮನ ಸೆಳೆಯುವ ಸಾಧನೆಯನ್ನು ಮಾಡಿದೆ.

ಇತ್ತೀಚಿನ ಸುದ್ದಿ