ವಿಶ್ವಕಪ್‌ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರನ ವಿರುದ್ಧ ಆಕ್ರೋಶ! - Mahanayaka

ವಿಶ್ವಕಪ್‌ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರನ ವಿರುದ್ಧ ಆಕ್ರೋಶ!

20/11/2023

ಈ ಬಾರಿಯೂ ವಿಶ್ವಕಪ್‌ ಭಾರತದ ಕೈತಪ್ಪಿ ಹೋಯ್ತು. ಆಸ್ಟ್ರೇಲಿಯಾ ವಿಶ್ವಕಪ್‌ ಗೆದ್ದು ಮತ್ತೆ ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ. ಯಾವುದೇ ಪಂದ್ಯದಲ್ಲಿ ಸೋಲದೇ ಸೋಲಿಲ್ಲದ ಸರದಾರ ಎಂದು ಬಿರುದು ಪಡೆದ ಟೀಮ್‌ ಇಂಡಿಯಾ ಫೈನಲ್‌ ನಲ್ಲಿ ಸೋಲನುಭವಿಸಿತು. ಈ ಎಲ್ಲದರ ನಡುವೆಯೇ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರನೋರ್ವನ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆಸ್ಟ್ರೇಲಿಯಾ ಆಟಗಾರ ಮಿಚೆಲ್‌ ಮಾರ್ಷ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಈ ಫೋಟೋ ವಿರುದ್ಧ ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಟ್ರೋಫಿಗಾಗಿ ಸಾಕಷ್ಟು ದೇಶಗಳು ಆಟವಾಡಿವೆ, ಕೋಟ್ಯಂತರ ಜನರು ಈ ಕ್ರಿಕೆಟ್‌ ಪಂದ್ಯಾಟವನ್ನು ವೀಕ್ಷಿಸಿದ್ದಾರೆ. ಆದರೆ ಇಂತಹ ಕಪ್‌  ಮೇಲೆ ಕಾಲಿಟ್ಟು ಕುಳಿತಿರುವುದು  ದುರಂಕಾರದ ಪರಮಾವಧಿ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಇನ್ನೊಂದೆಡೆ, ವಿದೇಶಿಯರು ಯಾವುದೇ ವಸ್ತುಗಳನ್ನು ವಸ್ತುಗಳ ರೀತಿಯಲ್ಲೇ ನೋಡುತ್ತಾರೆ, ಅದಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡುವುದಿಲ್ಲ, ಅವರು ತಮ್ಮ ಕಾಲನ್ನು ಅಪವಿತ್ರ ಎಂದು ಭಾವಿಸುವುದಿಲ್ಲ. ಹಾಗಾಗಿ ಟ್ರೋಫಿ ಮೇಲೆ ಕಾಲಿಟ್ಟರೂ ಅದೊಂದು ಅವಮಾನವಾಗಿ ನೋಡುವುದಿಲ್ಲ ಎನ್ನುವ ನಿಟ್ಟಿನಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ