ಕಡು ಬಡತನದಿಂದ ಶಾಲೆ ಬಿಟ್ಟರು: ಈಗ SSLC ಪರೀಕ್ಷೆ ಬರೆಯಲು ಸಿದ್ಧರಾದ ಖ್ಯಾತ ನಟ - Mahanayaka

ಕಡು ಬಡತನದಿಂದ ಶಾಲೆ ಬಿಟ್ಟರು: ಈಗ SSLC ಪರೀಕ್ಷೆ ಬರೆಯಲು ಸಿದ್ಧರಾದ ಖ್ಯಾತ ನಟ

indhrans
23/11/2023


Provided by

ಮಲಯಾಳಂನ ಖ್ಯಾತ ನಟ ಇಂದ್ರನ್ಸ್ ಅವರು ತಮ್ಮ 67ನೇ ವರ್ಷ ವಯಸ್ಸಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಬಾಲ್ಯದಲ್ಲಿ ಕಡು ಬಡತನದಲ್ಲಿ ಬೆಳೆದಿದ್ದ ನಟ, ಆರ್ಥಿಕ ಸಮಸ್ಯೆಯಿಂದಾಗಿ ನಾಲ್ಕನೆ ತರಗತಿಯ ನಂತರ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೇ ಶಾಲೆ ಬಿಟ್ಟಿದ್ದರು.

ಟೈಲರಿಂಗ್ ವೃತ್ತಿ ಆರಂಭಿಸಿದ್ದ ಇಂದ್ರನ್ಸ್ ಪ್ರೊಡಕ್ಷನ್ ಹೌಸ್ ಗಳಿಗೆ ವೇಷ ಭೂಷಣಗಳನ್ನು ಮಾಡುವ ಕೆಲಸ ಮಾಡುತ್ತಿದ್ದರು. ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಅವರು, 1994ರಲ್ಲಿ ಜನಪ್ರಿಯತೆ ಗಳಿಸಿದ್ದರು. ಇದೀಗ ರಾಜ್ಯ, ರಾಷ್ಟ್ರಮಟ್ಟದ ಚಲನ ಚಿತ್ರ ಪ್ರಶಸ್ತಿ ಗೆಲ್ಲುವ ಮೂಲಕ ಸಿನಿಮಾ ರಂಗದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ.

“ಶಿಕ್ಷಣ ಇಲ್ಲದೇ, ಅನಕ್ಷರಸ್ಥರಾಗಿರುವುದು ಕುರುಡುತನಕ್ಕೆ ಸಮಾನವಾಗಿದೆ, ನಾನು ಜಗತ್ತನ್ನು ನೋಡಬೇಕು ಎಂದು ಬಯಸುತ್ತೇನೆ, ಹಾಗಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಮುಂದಾಗಿರುವುದಾಗಿ ಇಂದ್ರನ್ಸ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ