ಬೆನ್ನು ಹುರಿ ಮುರಿದು ಹಾಸಿಗೆ ಹಿಡಿದಿರುವ ನಿಶಿತಾಳಿಗೆ ಬೆನ್ನೆಲುಬಾಗುವಿರಾ? - Mahanayaka

ಬೆನ್ನು ಹುರಿ ಮುರಿದು ಹಾಸಿಗೆ ಹಿಡಿದಿರುವ ನಿಶಿತಾಳಿಗೆ ಬೆನ್ನೆಲುಬಾಗುವಿರಾ?

chikkamagaluru
24/11/2023


Provided by

ಕೊಟ್ಟಿಗೆಹಾರ (ಚಿಕ್ಕಮಗಳೂರು): ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಹಾರ್ಗೋಡು ಗ್ರಾಮದ 5ನೇ ತರಗತಿ ಬಾಲಕಿ ನಿಶಿತಾ ಆಟವಾಡುವಾಗ ಬಿದ್ದು ಬೆನ್ನ ಹುರಿ(ಸ್ಪೈನಲ್ ಕಾರ್ಡ್)ಮುರಿದು ಹಾಸಿಗೆ ಹಿಡಿದಿರುವ ಕರಣಾಜನಕ ಘಟನೆ ಈಚೆಗೆ ನಡೆದಿದೆ.

ಬಾನಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ನಿಶಿತಾ ಪ್ರತಿಭಾವಂತೆಯಾಗಿದ್ದು, ಶಾಲೆಯಲ್ಲಿ ಓದುವುದರಲ್ಲೂ ಮುಂದಿದ್ದಳು. ಅರಳು ಹುರಿದಂತೆ ಮಾತನಾಡುವ ಬಾಲಕಿಗೆ ಶಾಲೆಯ ಒಂದು ದಿನದ ರಜೆ ತನ್ನ ಜೀವನವನ್ನೇ ಕೊರಗಿಸುವಂತೆ ಮಾಡಿದೆ.

ಮನೆಯ ಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ತಲೆಕೆಳಗಾಗಿ ಬಿದ್ದು ತನ್ನ ದೇಹದ ಕೈಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ಬಾಲಕಿ ಹಾರ್ ಗೋಡಿನ ಕೆ.ಆರ್. ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿಯಾಗಿದ್ದು, ಇವರು ಕೂಲಿ ಕಾರ್ಮಿಕರಾಗಿರುತ್ತಾರೆ. ದಿನದ ಒಪ್ಪತ್ತಿಗೂ ಕೂಲಿ ಕೆಲಸವನ್ನೇ ಅವಲಂಬಿಸಿದ್ದು, ಒಬ್ಬಳೇ ಮಗಳ ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದಾರೆ.

ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಶೇ ನೂರರಷ್ಟು ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಔಷಧಿಗೆ ಶೇ.50 ರಷ್ಟು ಸ್ಪಂದಿಸಿರುವ ಬಾಲಕಿ ಈಗ ಒಂದು ಕೈ ಹಾಗೂ ಕಾಲುಗಳಿಗೆ ಸ್ಪರ್ಶ ಬಂದಿದೆ.

ಬಣಕಲ್ ನ ಶ್ರೀ ಕೃಷ್ಣ ಕ್ಲಿನಿಕ್ ವೈದ್ಯರು ಅವಳಿಗೆ ಪಿಸಿಯೋತೆರಫಿ ನೀಡುತ್ತಿದ್ದಾರೆ. ಬಾಲಕಿಯು ಗುಣವಾಗುತ್ತೇನೆಂಬ ಆತ್ಮವಿಶ್ವಾಸದಿಂದ ಮುಂದಿನ ಕನಸು ಕಾಣುತ್ತಿದ್ದಾಳೆ. ನಿಲ್ಲಲು ಆಗದ ಕೈಯನ್ನು ಎತ್ತಲು ಆಗದ ಸ್ಥಿತಿಯಿಂದ ಇರುವ ಬಾಲಕಿ ನಿಶಿತಾಗೆ ಪೋಷಕರು ಚಿಕಿತ್ಸೆಗೆ ನೆರವು ಕೋರಿ ಮಹಾನಾಯಕದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಗುವಿನ ಚಿಕಿತ್ಸೆಗೆ ಸುಮಾರು 5 ಲಕ್ಷ ಖರ್ಚಿದೆ. ಸಹೃದಯಿಗಳಲ್ಲಿ ಪೋಷಕರು ನೆರವಿನ ಹಸ್ತ ಚಾಚಿದ್ದಾರೆ. ಹೆಚ್ಚಿನ ಮಾಹಿತಿಗೆ ಪೋಷಕರ ದೂರವಾಣಿ ಸಂಖ್ಯೆ 9980430710 ಕರೆ ಮಾಡಬಹುದು.

ಅಥವಾ ದಾನಿಗಳು ಖಾತೆ ಸಂಖ್ಯೆ 0692500136635601. ಐಎಫ್ ಎಸ್ ಸಿ ಕೋಡ್ : KARB0000069. ಅವರ ಖಾತೆಗೆ ಹಣ ಹಾಕಬಹುದು ಅಥವಾ ಪೋನ್ ಪೇ ಮಾಡುವ ಮೂಲಕ ನೆರವು ನೀಡಬಹುದು.

ಇತ್ತೀಚಿನ ಸುದ್ದಿ