ಪ್ರೀತಿಸಿದ ಯುವತಿಗೆ ಕದ್ದ ಮೊಬೈಲ್ ಗಿಫ್ಟ್ ನೀಡಿ ಸಿಕ್ಕಿ ಬಿದ್ದ ಕಳ್ಳರು! - Mahanayaka
10:20 AM Thursday 13 - November 2025

ಪ್ರೀತಿಸಿದ ಯುವತಿಗೆ ಕದ್ದ ಮೊಬೈಲ್ ಗಿಫ್ಟ್ ನೀಡಿ ಸಿಕ್ಕಿ ಬಿದ್ದ ಕಳ್ಳರು!

bengaluru 3
07/12/2023

ಬೆಂಗಳೂರು: ಪ್ರೀತಿಸಿದ ಯುವತಿಗೆ ಯುವಕನೋರ್ವ ಮೊಬೈಲ್ ಗಿಫ್ಟ್ ನೀಡಿದ ಬೆನ್ನಲ್ಲೇ ಆತನ ಸ್ನೇಹಿತರು ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉಸ್ಮಾನ್ ಪಾಷಾ, ಇರ್ಫಾನ್ ಜೀವ ಹಾಗೂ ಸೂರ್ಯ ಎಂಬ ಮೂವರು ಯುವಕರು ಕಳ್ಳತನದ ಆರೋಪದಲ್ಲಿ ಬಂಧಿತರಾದ ಯುವಕರಾಗಿದ್ದಾರೆ.

ರಾತ್ರಿ ಒಬ್ಬಂಟಿಯಾಗಿ ಓಡಾಡುವವರನ್ನು ಆರೋಪಿಗಳು ತಡೆದು ಅವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು. 2 ತಿಂಗಳ ಹಿಂದೆ ಬಡಪಾಯಿ ಡೆಲಿವರಿ ಬಾಯ್ ಯನ್ನು ಹೆದರಿಸಿದ ಆರೋಪಿ ಉಸ್ಮಾನ್, ಆತನ ಮೊಬೈಲ್, ನಗದು ದೋಚಿ ಪರಾರಿಯಾಗಿದ್ದನು.
ಬಳಿಕ ಕದ್ದ ಮೊಬೈಲ್ ನ್ನು ತನ್ನ ಪ್ರೇಯಸಿಗೆ ಗಿಫ್ಟ್ ನೀಡಿದ್ದನು. ಈ ಬಗ್ಗೆ ಬಂದಿದ್ದ ದೂರಿನ ಬೆನ್ನುಹತ್ತಿದ ಪೊಲೀಸರಿಗೆ ಗಿಫ್ಟ್ ಪಡೆದು ಯುವತಿ ಸಿಕ್ಕಿಬಿದ್ದಿದ್ದಳು. ಆರಂಭದಲ್ಲಿ ಯುವತಿಯೇ ಕಳ್ಳಿ ಎಂದು ಪೊಲೀಸರು ಭಾವಿಸಿದ್ದರು. ಆದ್ರೆ ವಿಚಾರಣೆ ವೇಳೆ ಬಾಯ್ ಫ್ರೆಂಡ್ ಗಿಫ್ಟ್ ನೀಡಿರುವ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ಪೊಲೀಸರು ಉಸ್ಮಾನ್ ನನ್ನು ವಿಚಾರಣೆ ನಡೆಸಿದಾಗ ಕಳ್ಳತನ ವಿಚಾರ ಹಾಗೂ ಉಳಿದ ಆರೋಪಿಗಳ ವಿಚಾರ ತಿಳಿದು ಬಂದಿದೆ. ತಕ್ಷಣವೇ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿ 1.5 ಲಕ್ಷ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ