ಸನ್ಮಾನ ಕಾರ್ಯಕ್ರಮದ ವೇಳೆಯಲ್ಲೇ ಕುಸಿದು ಬಿದ್ದ ವೇದಿಕೆ: ನೂತನ ಸಚಿವರಿಗೆ ಸ್ವಾಗತ ಕೋರಲು ನಿರ್ಮಿಸಿದ್ದ ವೇದಿಕೆ - Mahanayaka
10:02 AM Saturday 23 - August 2025

ಸನ್ಮಾನ ಕಾರ್ಯಕ್ರಮದ ವೇಳೆಯಲ್ಲೇ ಕುಸಿದು ಬಿದ್ದ ವೇದಿಕೆ: ನೂತನ ಸಚಿವರಿಗೆ ಸ್ವಾಗತ ಕೋರಲು ನಿರ್ಮಿಸಿದ್ದ ವೇದಿಕೆ

rajasthan
05/01/2024


Provided by

ರಾಜಸ್ಥಾನ: ಸ್ವಾಗತ ಸಮಾರಂಭವೊಂದಲ್ಲಿ ಸನ್ಮಾನ ಕಾರ್ಯಕ್ರಮದ ವೇಳೆ ಏಕಾಏಕಿ ವೇದಿಕೆ ಕುಸಿದು ಬಿದ್ದ ಘಟನೆ ರಾಜಸ್ಥಾನದ ಸಂಗೋಡು ಪೇಟೆಯಲ್ಲಿ ನಡೆದಿದ್ದು, ಸುಮಾರು 5 ಮಂದಿಗೆ ಗಾಯಗಳಾಗಿವೆ.

ರಾಜಸ್ಥಾನದ ಭಜನ್ ಲಾಲ್ ಸರ್ಕಾರದ ಸಚಿವ ಹೀರಾಲಾಲ್ ನಗರ್ ಅವರ ಸ್ವಾಗತ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರು ಸೇರಿದ್ದು, ಭಾರ ಹೆಚ್ಚಾದ ಪರಿಣಾಮ ವೇದಿಕೆ ಏಕಾಏಕಿ ಕುಸಿದು ಬಿದ್ದಿದೆ.

ಸಚಿವರಾಗಿ ಆಯ್ಕೆಯಾದ ಬಳಿಕ ಸಚಿವ ಹೀರಾಲಾಲ್ ನಗರ್ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದರು. ಹೀಗಾಗಿ ಅವರಿಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಸ್ವಾಗತಕ್ಕಾಗಿ ನಿರ್ಮಿಸಿದ್ದ ವೇದಿಕೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದಿದೆ.


 

ಇತ್ತೀಚಿನ ಸುದ್ದಿ