ಮನೆಯನ್ನು ಹರಾಜು ಹಾಕಿದ ಬ್ಯಾಂಕ್ ಸಿಬ್ಬಂದಿ: ನೊಂದ ದಂಪತಿ ವಿಧಾನಸೌಧ ಎದುರು ಆತ್ಮಹತ್ಯೆಗೆ ಯತ್ನ!

ಬೆಂಗಳೂರು: ತಾವು ವಾಸಿಸುತ್ತಿದ್ದ ಮನೆಯನ್ನು ಬ್ಯಾಂಕ್ ನವರು ಹರಾಜು ಹಾಕಿದರಿಂದ ನೊಂದು ದಂಪತಿಗಳಿಬ್ಬರು ವಿಧಾನ ಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜೆ.ಜೆ.ನಗರದ ಶಾಯಿಸ್ತಾ ಹಾಗೂ ಮಹಮ್ಮದ್ ಮನಾಯಿದ್ ದಂಪತಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು. ಸಾಲ ಪಾವತಿಸದ ಕಾರಣ ಬ್ಯಾಂಕ್ ನವರು ಜಮೀನು ಹರಾಜು ಹಾಕಿದ್ದರು.
ಇದರಿಂದ ನೊಂದ ದಂಪತಿ ನಮಗೆ ನ್ಯಾಯ ಬೇಕು ಅಂತ ಒತ್ತಾಯಿಸಿ, ವಿಧಾನ ಸೌಧದ ಎದುರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.
ದಂಪತಿ ಸೀಮೆ ಎಣ್ಣೆ ಸುರಿದುಕೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ಅವರನ್ನು ತಡೆದು ರಕ್ಷಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
Click: ಮಗನನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ರಾ ಸುಚನಾ?: ಬಾಲಕನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ತಂದೆ!
Click : 2 ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂವರನ್ನು ಗುಂಡು ಹಾರಿಸಿ ಬರ್ಬರ ಹತ್ಯೆ!
Click: ಆಸ್ಪತ್ರೆಗೆ ಸೇರಿಸಿಕೊಳ್ಳದ ಸಿಬ್ಬಂದಿ: ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ