ಭೀಕರ: ಜತೆಯಾಗಿ ಇದ್ದರೂ ಪದೇ ಪದೇ ಆಗ್ತಿತ್ತು ಗಲಾಟೆ; ಸಾಧ್ವಿಯನ್ನು ಕೊಂದೇ ಬಿಟ್ಟ ಜೊತೆಗಿದ್ದ ಸನ್ಯಾಸಿ..!

ಗುರ್ಗಾಂವ್ ನ ಮಿರ್ಜಾಪುರ ಗ್ರಾಮದಲ್ಲಿ 50 ವರ್ಷದ ಸಾಧ್ವಿಯನ್ನು ಕೊಲೆ ಮಾಡಲಾಗಿದೆ. ಇದೀಗ ಒಂದು ದಿನದ ನಂತರ ಅಪರಾಧ ಎಸಗಿದ ಆರೋಪದ ಮೇಲೆ ಅವಳೊಂದಿಗೆ ವಾಸಿಸುತ್ತಿದ್ದ ಸನ್ಯಾಸಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. 70 ವರ್ಷದ ಆರೋಪಿಯು ಸಣ್ಣ ವಿಷಯಕ್ಕೆ ಉಂಟಾದ ಜಗಳದ ನಂತರ ರೋಶ್ನಿ ದೇವಿಯ ಕತ್ತು ಸೀಳಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕೆನ್ ಹೇಳಿದ್ದಾರೆ.
ಆರೋಪಿಯನ್ನು ಸೋನಿಪತ್ನ ಗಗನಾ ಗ್ರಾಮದ ನಫೆ ಅಲಿಯಾಸ್ ಖಮೈ ನಾಥ್ ಎಂದು ಗುರುತಿಸಲಾಗಿದೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ವಾಗ್ವಾದದ ಸಮಯದಲ್ಲಿ ತಾನು ದೇವಿಯನ್ನು ಆಯುಧದಿಂದ ಹೆದರಿಸಲು ಪ್ರಯತ್ನಿಸಿದೆ. ಆದರೆ ಆಕಸ್ಮಿಕವಾಗಿ ಮಹಿಳೆಯ ಕುತ್ತಿಗೆಗೆ ಹೊಡೆದಾಗ ಆಕೆಗೆ ಮಾರಣಾಂತಿಕ ಗಾಯಗಳಾಗಿವೆ ಎಂದು ನಫೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಹಾಲು ತರಲು ಹೋಗಿದ್ದೆ. ಅವರ ಗುಡಿಸಲಿಗೆ ಹಿಂತಿರುಗಿದಾಗ, ರೋಶ್ನಿ ರಕ್ತದ ಮಡುವಿನಲ್ಲಿ ಗಾಯಗೊಂಡಿರುವುದನ್ನು ನೋಡಿದೆ ಎಂದು ಅವರು ಮೊದಲು ಪೊಲೀಸರಿಗೆ ತಿಳಿಸಿದ್ದರು. ತೀವ್ರ ವಿಚಾರಣೆ ನಡೆಸಿದ ವೇಳೆ ಸತ್ಯ ಬಯಲಾಗಿದೆ.