ಇದ್ದಕ್ಕಿದ್ದಂತೆ ಸರ್ವರ್ ಡೌನ್: ಯುಪಿಐ ಪೇಮೆಂಟ್ ಮಾಡಕ್ಕಾಗದೇ ಕಂಗಲಾದ ಜನರು - Mahanayaka

ಇದ್ದಕ್ಕಿದ್ದಂತೆ ಸರ್ವರ್ ಡೌನ್: ಯುಪಿಐ ಪೇಮೆಂಟ್ ಮಾಡಕ್ಕಾಗದೇ ಕಂಗಲಾದ ಜನರು

06/02/2024


Provided by

ಯುಪಿಐ – ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಜೊತೆಗೆ ಬ್ಯಾಂಕಿಂಗ್ ವಲಯದಲ್ಲಿ ದೇಶಾದ್ಯಂತ ಸರ್ವರ್‌ ಡೌನ್‌ ಆದ ಹಿನ್ನೆಲೆ ಮಂಗಳವಾರ ಸಂಜೆ ವೇಳೆಗೆ ಹಲವೆಡೆ ಗ್ರಾಹಕರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅನೇಕ ಗ್ರಾಹಕರು ಯುಪಿಐ ಪಾವತಿ ವೇಳೆ ತಾವು ಅನುಭವಿಸಿದ ಕಷ್ಟವನ್ನು ಹಂಚಿಕೊಂಡಿದ್ದಾರೆ.

ನೆಟ್ಟಿಗರು ಗೂಗಲ್ ಪೇ, ಪೋನ್ ಪೇ, ಭೀಮ್ ಸೇರಿದಂತೆ ಹಲವು ಯುಪಿಐ ಅಪ್ಲಿಕೇಶನ್‌ಗಳಿಂದ ಪಾವತಿ ಮಾಡುವಲ್ಲಿ ಕಷ್ಟವನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಹೆಚ್‌ಡಿಎಫ್‌ಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳ ಯುಪಿಐ ವಹಿವಾಟುಗಳ ಮೇಲೆ ಸರ್ವರ್ ಸಮಸ್ಯೆಯ ಪರಿಣಾಮ ಬೀರಿದೆ. ಇದರಿಂದ ಬಳಕೆದಾರರು ತೊಂದರೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

ಹಲವು ಬ್ಯಾಂಕ್‌ಗಳ ಯುಪಿಐ ಸೇವೆ ಸ್ಥಗಿತವಾಗಿರುವ ಬಗ್ಗೆ ಬಳಕೆದಾರರು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಸೇವಾ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡುವ ವೇದಿಕೆ ಡೌನ್‌ಡೆಕ್ಟರ್ ಕೂಡಾ ಈ ವರದಿಗಳನ್ನು ಗಮನಿಸಿದೆ. ಆದರೆ ಅನೇಕ ಬ್ಯಾಂಕ್‌ಗಳ ಯುಪಿಐ ವಹಿವಾಟುಗಳಲ್ಲಿ ತೊಂದರೆ ಆಗುತ್ತಿರುವುದನ್ನು ಬಳಕೆದಾರರು ವರದಿ ಮಾಡಿದ್ದರೂ ಬ್ಯಾಂಕ್‌ಗಳು ಅಥವಾ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಸ್ಥಗಿತವನ್ನು ಇನ್ನೂ ಒಪ್ಪಿಕೊಂಡಿಲ್ಲ. ಹೀಗಾಗಿ ಆನ್ ಲೈನ್ ಗ್ರಾಹಕರು ಕಕ್ಕಾಬಿಕ್ಕಿಯಾದ್ರು.

ಇತ್ತೀಚಿನ ಸುದ್ದಿ