ಮ್ಯಾರಥಾನ್ ವಿಶ್ವದಾಖಲೆ ವೀರ ಕೆನ್ಯಾದ ಕೆಲ್ವಿನ್ ಕಿಪ್ಟಮ್ ಕಾರು ಅಪಘಾತದಲ್ಲಿ ಸಾವು! - Mahanayaka

ಮ್ಯಾರಥಾನ್ ವಿಶ್ವದಾಖಲೆ ವೀರ ಕೆನ್ಯಾದ ಕೆಲ್ವಿನ್ ಕಿಪ್ಟಮ್ ಕಾರು ಅಪಘಾತದಲ್ಲಿ ಸಾವು!

kelvin kiptom
12/02/2024


Provided by

ನೈರೋಬಿ (ಎಪಿ): ಭಾನುವಾರ ರಾತ್ರಿ ನಡೆದ ಭೀಕರ ಕಾರು ಅಪಘಾತದಲ್ಲಿ ಮ್ಯಾರಥಾನ್ ವಿಶ್ವದಾಖಲೆ ವೀರ, ಕೆನ್ಯಾದ ಕೆಲ್ವಿನ್ ಕಿಪ್ಟಮ್ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ಕೆನ್ಯಾದ ರಿಫ್ಟ್‌ ಕಣಿವೆಯ ಕಿಪ್ಟಾಗತ್- ಎಲ್ಟೊರೆಟ್‌ ಹಾದಿಯಲ್ಲಿ  ಈ ಅಪಘಾತ ನಡೆದಿದ್ದು,  ಕಾರು ಕಿಪ್ಸಾಬೆಟ್ ಎಂಬಲ್ಲಿ ರಸ್ತೆಯಿಂದ ಜಾರಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ.

ಕೆಲ್ವಿನ್ ಕಿಪ್ಟಮ್ ಅವರ ಜೊತೆಗೆ ಅವರ ಕೋಚ್ ರುವಾಂಡದ ಜರ್ವೈಸ್‌ ಹಕಿಝಿಮನಾ ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ 24 ವರ್ಷ ವಯಸ್ಸಿನ ಯುವತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.

ಕೆಲ್ವಿನ್ ಕಿಪ್ಟಮ್ ಅವರು ಸತತ ಸಾಧನೆಗಳಿಂದ ಅವರು ಸರ್ವಶ್ರೇಷ್ಠ ಓಟಗಾರನಾಗುವ ಭರವಸೆ ಮೂಡಿಸಿದ್ದರು. ತಮ್ಮ ಮೂರನೇ ಓಟದಲ್ಲೇ ಅವರು ವಿಶ್ವ ದಾಖಲೆ ಸ್ಥಾಪಿಸಿದ್ದರು.

ಇತ್ತೀಚಿನ ಸುದ್ದಿ