ಬುಲ್ಡೋಜರ್ ಬಳಸಿ ಮಸೀದಿ, ಮದ್ರಸಾ ಧ್ವಂಸ: ಅಮ್ನೆಸ್ಟಿ ಇಂಟರ್ ನ್ಯಾಷನಲ್ ತೀವ್ರ ಖಂಡನೆ - Mahanayaka
1:27 AM Tuesday 27 - February 2024

ಬುಲ್ಡೋಜರ್ ಬಳಸಿ ಮಸೀದಿ, ಮದ್ರಸಾ ಧ್ವಂಸ: ಅಮ್ನೆಸ್ಟಿ ಇಂಟರ್ ನ್ಯಾಷನಲ್ ತೀವ್ರ ಖಂಡನೆ

12/02/2024

ಹಲ್ದ್ವಾನಿಯಲ್ಲಿ ಒಂದು ಮಸೀದಿ ಮತ್ತು ಮದ್ರಸವನ್ನು ಉತ್ತರಾಖಂಡ ಸರಕಾರ ಬುಲ್ಡೋಜರ್ ಬಳಸಿ ಧ್ವಂಸ ಮಾಡಿರುವಂತೆಯೇ
ಭಾರತದಲ್ಲಿ ಮುಸ್ಲಿಮರ ಮನೆಗಳು ಅಂಗಡಿ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವ ಕೃತ್ಯದ ವಿರುದ್ಧ ಅಮ್ನೆಸ್ಟಿ ಇಂಟರರ್ ನ್ಯಾಷನಲ್ ಪ್ರಬಲ ವರದಿಯನ್ನು ಬಿಡುಗಡೆ ಮಾಡಿ ಖಂಡಿಸಿದೆ.

ಎರಡು ಟೈಟಲ್ ಗಳಲ್ಲಿ ವರದಿಯನ್ನು ತಯಾರಿಸಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅಸ್ಸಾಂ, ದೆಹಲಿ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ನಡೆದಿರುವ ಮುಸ್ಲಿಂ ದ್ವೇಷದ ಕೃತ್ಯಗಳನ್ನು ಪಟ್ಟಿ ಮಾಡಿದೆ.
800 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ದೆಹಲಿಯಲ್ಲಿ ಸರ್ಕಾರ ದ್ವಂಸ ಮಾಡಿರುವುದು ಕೂಡ ಈ ಪಟ್ಟಿಯಲ್ಲಿ ಸೇರಿದೆ. ಭಾರತದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಆಸ್ತಿಗಳನ್ನು ಆರಾಧನಾ ಕೇಂದ್ರಗಳನ್ನು ಧ್ವಂಸ ಮಾಡುವುದು ರೂಢಿಯಾಗಿ ಬಿಟ್ಟಿದೆ ಎಂದು ಕೂಡ ಅದು ಹೇಳಿದೆ.

2022 ರಲ್ಲಿ ಏಪ್ರಿಲ್ ಮತ್ತು ಜೂನ್ ನ ನಡುವೆ ಮುಸ್ಲಿಮರಿಗೆ ಸಂಬಂಧಿಸಿದ 128 ಆಸ್ತಿಪಾಸ್ತಿಗಳಿಗೆ ಬುಲ್ಡೋಜರ್ ಬಳಸಿ ನಾಶ ಮಾಡಲಾಗಿದೆ ಎಂದು ಅದು ಹೇಳಿದೆ. ಇದರಿಂದ 617 ಮಂದಿ ನೇರವಾಗಿ ಅದರ ಸಂತ್ರಸ್ಥರಾಗಿದ್ದಾರೆ ಎಂದು ಕೂಡ ವರದಿ ತಿಳಿಸಿದೆ.

ಇತ್ತೀಚಿನ ಸುದ್ದಿ