ಫೆಲೆಸ್ತೀನಿ ಪರ ಪ್ರಬಲ ಧ್ವನಿಯಾಗಿದ್ದರು ಇವರು: ನೆದರ್ ಲ್ಯಾಂಡ್ ನ ಮಾಜಿ ಪ್ರಧಾನಿ ಡ್ರೀಸ್ & ಪತ್ನಿ ಯುಜಿಸ್ ದಯಾಮರಣ - Mahanayaka
1:39 PM Tuesday 27 - February 2024

ಫೆಲೆಸ್ತೀನಿ ಪರ ಪ್ರಬಲ ಧ್ವನಿಯಾಗಿದ್ದರು ಇವರು: ನೆದರ್ ಲ್ಯಾಂಡ್ ನ ಮಾಜಿ ಪ್ರಧಾನಿ ಡ್ರೀಸ್ & ಪತ್ನಿ ಯುಜಿಸ್ ದಯಾಮರಣ

12/02/2024

ನೆದರ್ ಲ್ಯಾಂಡ್ ನ ಮಾಜಿ ಪ್ರಧಾನಿ ಡ್ರೀಸ್ ಮತ್ತು ಅವರ ಪತ್ನಿ ಯುಜಿಸ್ ಅವರು ದಯಾಮರಣಕ್ಕೆ ಒಳಗಾಗಿದ್ದಾರೆ. ಇಬ್ಬರೂ ಕೈ ಕೈ ಹಿಡಿದು ಸಾವನ್ನು ಅಪ್ಪಿಕೊಂಡಿದ್ದಾರೆ. ನೆದರ್ ಲ್ಯಾಂಡ್ ನಲ್ಲಿ ದಯಾ ಮರಣಕ್ಕೆ ಅವಕಾಶ ಇದೆ. ಫೆಲೆಸ್ತೀನಿ ಪರ ಪ್ರಬಲ ಧ್ವನಿಯಾಗಿದ್ದ ಡ್ರೀಸ್ 2019ರಲ್ಲಿ ಫೆಲೆಸ್ತೀನಿ ಪರ ರ‍್ಯಾಲಿಯಲ್ಲಿ ಮಾತಾಡುತ್ತಲೇ ಮೆದುಳು ಆಘಾತಕ್ಕೆ ಒಳಗಾಗಿದ್ದರು.

ಡ್ರೀಸ್ ಅವರು 1975 ರಿಂದ 82ರ ವರೆಗೆ ನೆದರ್ ಲ್ಯಾಂಡ್ ನ ಪ್ರಧಾನಿಯಾಗಿದ್ದರು. ಈಗ ಅವರಿಗೆ 93 ವರ್ಷ ಪ್ರಾಯ. ಕಳೆದ 70 ವರ್ಷಗಳಿಂದ ತನ್ನ ಪತಿಯನ್ನು ಆಧರಿಸಿ ಪ್ರೀತಿಸಿದ ಯುಜಿಸ್ ಅವರು ಪತಿಯೊಂದಿಗೆ ಕೈಜೋಡಿಸಿ ಜೊತೆಯಾಗಿ ಮರಣವನ್ನು ಅಪ್ಪಿದ್ದಾರೆ.

2019ರಲ್ಲಿ ಮೆದುಳು ಆಘಾತಕ್ಕೆ ಒಳಗಾದ ಬಳಿಕ ಡ್ರೀಸ್ ಅವರು ಸಂಪೂರ್ಣ ಗುಣಮುಖರಾಗಿರಲಿಲ್ಲ. 2017ರಲ್ಲಿ ಅವರ ಪಕ್ಷ ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ವಿಷಯದಲ್ಲಿ ಧೋರಣೆ ಬದಲಿಸಿರುವುದಕ್ಕಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 1999ರಲ್ಲಿ ಇವರು ಇಸ್ರೇಲ್ ಗೆ ಭೇಟಿ ನೀಡಿದರು. ಆ ಬಳಿಕ ಅವರು ಫೆಲೆಸ್ತೀನ್ ಪರ ಪ್ರಬಲ ಧ್ವನಿಯಾಗಿ ಬದಲಾದರು. ತನ್ನ ನಿಲುವನ್ನು ಈ ಭೇಟಿ ಬದಲಿಸಿತು ಎಂದವರು ಹೇಳಿದ್ದರು.

ಇತ್ತೀಚಿನ ಸುದ್ದಿ