ದುರಂತ: ಅಮೆರಿಕದ 2 ಮಿಲಿಯನ್ ಡಾಲರ್ ಮೌಲ್ಯದ ಮನೆಯಲ್ಲಿ ಭಾರತೀಯ ಕುಟುಂಬ ಶವವಾಗಿ ಪತ್ತೆ - Mahanayaka
6:27 PM Thursday 16 - October 2025

ದುರಂತ: ಅಮೆರಿಕದ 2 ಮಿಲಿಯನ್ ಡಾಲರ್ ಮೌಲ್ಯದ ಮನೆಯಲ್ಲಿ ಭಾರತೀಯ ಕುಟುಂಬ ಶವವಾಗಿ ಪತ್ತೆ

14/02/2024

ಕ್ಯಾಲಿಫೋರ್ನಿಯಾ: ಭಾರತದ ಕೇರಳ ಮೂಲದ ಕುಟುಂಬವೊಂದು ಅಮೆರಿಕದ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಆಲಿಸ್ ಪ್ರಿಯಾಂಕಾ (40) ಮತ್ತು ಅವರ 4 ವರ್ಷದ ಅವಳಿ ಮಕ್ಕಳಾದ ನೋವಾ ಮತ್ತು ನೀಥಾನ್ ಎಂದು ಗುರುತಿಸಲಾಗಿದೆ.


Provided by

ಮನೆಯಲ್ಲಿ ಯಾರೂ ಮೊಬೈಲ್ ಕಾಲ್ ತೆಗೆಯದ ಕಾರಣ ಕುಟುಂಬದ ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.
ಭಾರತೀಯ-ಅಮೆರಿಕನ್ ದಂಪತಿ ಆನಂದ್ ಮತ್ತು ಆಲಿಸ್ ಸ್ನಾನಗೃಹದಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಅವಳಿ ಮಕ್ಕಳು ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯನ್ನು ಪರಿಶೀಲಿಸಿದರು‌. ಲಾಕ್ ಮಾಡದ ಕಿಟಕಿಯನ್ನು ಕಂಡು, ಅಧಿಕಾರಿಗಳು ಮನೆಗೆ ಪ್ರವೇಶಿಸಿ ನಾಲ್ಕು ಜನರು ಸತ್ತಿರುವುದನ್ನು ಕಂಡುಕೊಂಡರು; 1 ವಯಸ್ಕ ಪುರುಷ, 1 ವಯಸ್ಕ ಮಹಿಳೆ ಮತ್ತು ಇಬ್ಬರು ಮಕ್ಕಳು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನಾನಗೃಹದಿಂದ 9 ಎಂಎಂ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿ