ರಾಜ್ಯಸಭಾ ಟಿಕೆಟ್ ಕೇಳಿದ್ದ ಕಮಲ್ ನಾಥ್: ಟಿಕೆಟ್ ಕೊಡಲು ಕಾಂಗ್ರೆಸ್ ನಿರಾಕರಿಸಿದ್ದೇ ಮುನಿಸಿಗೆ ಕಾರಣವಂತೆ..! - Mahanayaka

ರಾಜ್ಯಸಭಾ ಟಿಕೆಟ್ ಕೇಳಿದ್ದ ಕಮಲ್ ನಾಥ್: ಟಿಕೆಟ್ ಕೊಡಲು ಕಾಂಗ್ರೆಸ್ ನಿರಾಕರಿಸಿದ್ದೇ ಮುನಿಸಿಗೆ ಕಾರಣವಂತೆ..!

18/02/2024


Provided by

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಿಜೆಪಿ ಪಕ್ಷಕ್ಕೆ ಸೇರುವ ಸಾಧ್ಯತೆಯ ಬಗ್ಗೆ ವದಂತಿಗಳ ಮಧ್ಯೆ, ಕಾಂಗ್ರೆಸ್ ಪಕ್ಷದ ನಾಯಕತ್ವವು ಅವರಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ್ದರಿಂದ ಹಿರಿಯ ನಾಯಕ ಪಕ್ಷ ಬದಲಾವಣೆಗೆ ಯೋಚಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಮಲ್ ನಾಥ್ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಮತ್ತು ಕಾಂಗ್ರೆಸ್ ನಾಯಕತ್ವವು ಅವರನ್ನು ಸಮಾಧಾನಪಡಿಸಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಕಮಲ್ ನಾಥ್ ಅವರು ರಾಜ್ಯಸಭಾ ಟಿಕೆಟ್ ಗಾಗಿ ಸಕ್ರಿಯವಾಗಿ ಲಾಬಿ ನಡೆಸುತ್ತಿರುವುದರಿಂದ ಈ ವಿಚಾರ ಗರಿಗೆದರಿವೆ ಎಂದು ಕಾಂಗ್ರೆಸ್ ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.

ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಅವರು ಪಕ್ಷ ಬದಲಾವಣೆಗಾಗಿ ಬಿಜೆಪಿ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. ಕಮಲ್ ನಾಥ್ ಶನಿವಾರ ದೆಹಲಿಗೆ ಆಗಮಿಸಿದ ನಂತರ ಊಹಾಪೋಹಗಳು ಉತ್ತುಂಗಕ್ಕೇರಿದವು. ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ರಾಜಕಾರಣಿ, ಅಂತಹ ಯಾವುದೇ ವಿಷಯವಿದ್ದರೆ, ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.

ಪಕ್ಷ ಬದಲಾವಣೆಯನ್ನು ನೀವು ನಿರಾಕರಿಸುತ್ತಿಲ್ಲವೇ ಎಂದು ವರದಿಗಾರರೊಬ್ಬರು ಕೇಳಿದಾಗ, ಕಮಲ್ ನಾಥ್, “ಇದನ್ನು ನೀವೇ ಹೇಳುತ್ತಿದ್ದೀರಿ. ನೀವು ಉತ್ಸುಕರಾಗಿದ್ದೀರಿ. ನಾನು ಈ ಕಡೆ ಅಥವಾ ಆ ಕಡೆಯಿಂದ ಉತ್ಸುಕನಾಗುತ್ತಿಲ್ಲ. ಆದರೆ ಅಂತಹ ಯಾವುದೇ ವಿಷಯವಿದ್ದರೆ, ನಾನು ಮೊದಲು ನಿಮಗೆ ತಿಳಿಸುತ್ತೇನೆ” ಎಂದಿದ್ದರು. ಕಮಲ್ ನಾಥ್ ಅವರನ್ನು ಸಮಾಧಾನಪಡಿಸಲು ಪಕ್ಷವು ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ