ಹೋರಾಟ: ಕೇಂದ್ರದೊಂದಿಗಿನ ಸಭೆಗೂ ಮುನ್ನ ಎಂಎಸ್ಪಿ ಸುಗ್ರೀವಾಜ್ಞೆಗೆ ಪ್ರತಿಭಟನಾನಿರತ ರೈತರ ಆಗ್ರಹ - Mahanayaka

ಹೋರಾಟ: ಕೇಂದ್ರದೊಂದಿಗಿನ ಸಭೆಗೂ ಮುನ್ನ ಎಂಎಸ್ಪಿ ಸುಗ್ರೀವಾಜ್ಞೆಗೆ ಪ್ರತಿಭಟನಾನಿರತ ರೈತರ ಆಗ್ರಹ

18/02/2024


Provided by

ಕೇಂದ್ರ ಸಚಿವರೊಂದಿಗಿನ ನಿರ್ಣಾಯಕ ಸಭೆಗೆ ಮುಂಚಿತವಾಗಿ, ಎಂಎಸ್ಪಿಗೆ ಕಾನೂನು ಖಾತರಿ ನೀಡುವ ಬಗ್ಗೆ ಸುಗ್ರೀವಾಜ್ಞೆ ತರುವಂತೆ ರೈತ ಮುಖಂಡರು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಪಂಜಾಬ್ ನ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಟ್ರ್ಯಾಕ್ಟರ್ ಮೆರವಣಿಗೆ ಮತ್ತು ಧರಣಿಗಳು ನಡೆದವು.

ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ಪಂಜಾಬ್ ನ ರೈತ ಮುಖಂಡರು ನಾಲ್ಕನೇ ಸುತ್ತಿನ ಮಾತುಕತೆಗಾಗಿ ಭಾನುವಾರ ಸಭೆ ಸೇರಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಉಭಯ ಕಡೆಯವರು ಭೇಟಿಯಾಗಿದ್ದರು. ಆದರೆ ಆ ಮಾತುಕತೆಗಳು ಸಕ್ಸಸ್ ಕಂಡಿರಲಿಲ್ಲ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ದೆಹಲಿ ಚಲೋ’ ಮೆರವಣಿಗೆಯು ಐದನೇ ದಿನದಂದು ರೈತರು ಪಂಜಾಬ್-ಹರಿಯಾಣ ಗಡಿಯ ಶಂಭು ಮತ್ತು ಖನೌರಿ ಪಾಯಿಂಟ್ ಗಳಲ್ಲಿ ಉಳಿದುಕೊಂಡಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ.

ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾದ ಎಂಎಸ್ಪಿಗೆ ಕಾನೂನು ಖಾತರಿ ನೀಡುವ ಬಗ್ಗೆ ಕೇಂದ್ರವು ಸುಗ್ರೀವಾಜ್ಞೆ ತರಬೇಕು ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಶನಿವಾರ ಒತ್ತಾಯಿಸಿದರು.

ಇತ್ತೀಚಿನ ಸುದ್ದಿ