ಪತ್ನಿಗೆ ಗೊತ್ತಾಯಿತು ಪತಿಯ ಅಸಲಿಯತ್ತು: ಹೆಂಡ್ತಿಗೆ ಹೆದರಿ ಪ್ರಿಯತಮೆಯನ್ನು ವಿಷ ಹಾಕಿ ಕೊಂದ ವ್ಯಕ್ತಿ..!

ಪತ್ನಿಯ ಒತ್ತಡಕ್ಕೆ ಮಣಿದು ಪತಿಯೊಬ್ಬ ಯುವತಿಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಮಸ್ತಿಪುರದಲ್ಲಿ ಈ ಘಟನೆ ನಡೆದಿದ್ದು, ರಾಜ್ ಕುಮಾರ್ ಮೆಹ್ತಾ ಮತ್ತು ಅವರ ಪತ್ನಿ ಸಂಜು ದೇವಿ, ಆರೋಪಿಗಳು.
ಮೊಟ್ಟೆಯ ರೋಲ್ ನಲ್ಲಿ ವಿಷವನ್ನು ನೀಡಿ ಯುವತಿಯನ್ನು ಕೊಲೆ ಮಾಡಲಾಗಿದ್ದು ಈ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಸರೋವರವೊಂದರ ಬಳಿ ಪೊಲೀಸರು ಯುವತಿಯ ಶವವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ವಿಶ್ಲೇಷಣೆ ಮತ್ತು ಸಂತ್ರಸ್ತೆಯ ಕರೆ ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ದಂಪತಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ವಿಚಾರಣೆ ವೇಳೆ ರಾಜ್ ಕುಮಾರ್ ತಾನು ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಬಾಯ್ಬಿಟ್ಟಿದ್ದು, ಇದು ಕೊಲೆಗೆ ಕಾರಣವಾಯಿತು ಎನ್ನಲಾಗಿದೆ. ಪತ್ನಿಯ ಒತ್ತಡಕ್ಕೆ ಮಣಿದ ರಾಜ್ ಕುಮಾರ್, ಯುವತಿಗೆ ಮೊಟ್ಟೆಗೆ ವಿಷ ಬೆರೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆ ಮಾಡಿದ ನಂತರ ದಂಪತಿ ಶವವನ್ನು ಕಂಬಳಿಯಲ್ಲಿ ಸುತ್ತಿ, ಕಾರಿನಲ್ಲಿ ಇರಿಸಿ, ಸರೋವರದ ಬಳಿ ಎಸೆದಿದ್ದಾರೆ.
ರಾಜ್ ಕುಮಾರ್ ಮೆಹ್ತಾ ಮತ್ತು ಸಂಜು ದೇವಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಈಗ ಕಸ್ಟಡಿಯಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.