ಸಿವಿಲ್ ವಂಚನೆ ಪ್ರಕರಣ: ಡೊನಾಲ್ಡ್ ಟ್ರಂಪ್ ಗೆ 454 ಮಿಲಿಯನ್ ಡಾಲರ್ ದಂಡ

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿವಿಲ್ ವಂಚನೆ ಪ್ರಕರಣದಲ್ಲಿ ತಮ್ಮ ನಿವ್ವಳ ಮೌಲ್ಯವನ್ನು ತಿರುಚಿದ್ದಾರೆ ಎಂದು ಸಾಬೀತಾದ ನಂತರ ನ್ಯೂಯಾರ್ಕ್ ನ್ಯಾಯಾಧೀಶರು 454.2 ಮಿಲಿಯನ್ ಡಾಲರ್ ಪಾವತಿಸುವಂತೆ ಆದೇಶ ನೀಡಿದ್ದಾರೆ.
ಮ್ಯಾನ್ ಹ್ಯಾಟನ್ ರಾಜ್ಯ ನ್ಯಾಯಾಲಯದ ನ್ಯಾಯಮೂರ್ತಿ ಆರ್ಥರ್ ಎಂಗೊರಾನ್ ಫೆಬ್ರವರಿ 16 ರಂದು ಆದೇಶಿಸಿದ್ದು 354.9 ಮಿಲಿಯನ್ ಡಾಲರ್ ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ.
ಟ್ರಂಪ್ ಅವರ ವಯಸ್ಕ ಪುತ್ರರಾದ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಎರಿಕ್ ಟ್ರಂಪ್ ಅವರಿಗೆ ತಲಾ 4.7 ಮಿಲಿಯನ್ ಡಾಲರ್ ಮತ್ತು ಟ್ರಂಪ್ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಅಲೆನ್ ವೈಸೆಲ್ಬರ್ಗ್ ಗೆ ಬಡ್ಡಿ ಸೇರಿದಂತೆ 1.1 ಮಿಲಿಯನ್ ಡಾಲರ್ ಪಾವತಿಸುವಂತೆ ನ್ಯಾಯಮೂರ್ತಿ ಎಂಗೊರಾನ್ ಆದೇಶಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth