22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಯೋತ್ಪಾದಕ ಅರೆಸ್ಟ್: ಒಂದೇ ಒಂದು ಸುಳಿವು ಮೂಲಕ ದೆಹಲಿ ಪೊಲೀಸರ ಕಾರ್ಯಾಚರಣೆ - Mahanayaka

22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಯೋತ್ಪಾದಕ ಅರೆಸ್ಟ್: ಒಂದೇ ಒಂದು ಸುಳಿವು ಮೂಲಕ ದೆಹಲಿ ಪೊಲೀಸರ ಕಾರ್ಯಾಚರಣೆ

25/02/2024


Provided by

ನಿಷೇಧಿತ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾದ (ಸಿಮಿ) ಸದಸ್ಯ ಹನೀಫ್ ಶೇಖ್ (47) ಎಂಬಾತನನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ. ಸಿಮಿ ಅಡಿಯಲ್ಲಿ ಪ್ರಕಟ ಆಗುತ್ತಿದ್ದ ನಿಯತಕಾಲಿಕೆಯೊಂದರ ಸಂಪಾದಕನಾಗಿದ್ದಾಗ ಅವನು ಬಳಸಿದ ಅಡ್ಡಹೆಸರಿನ ಆಧಾರದಲ್ಲಿ ಪೊಲೀಸರು ಅವನನ್ನು ಬಂಧಿಸಲು ಸಾಧ್ಯವಾಯಿತು.

ದೆಹಲಿ ಪೊಲೀಸರಿಂದ ಅತ್ಯಂತ ಕುಖ್ಯಾತ ಮತ್ತು ವಾಂಟೆಡ್ ಸಿಮಿ ಭಯೋತ್ಪಾದಕ ಎಂದು ಬಣ್ಣಿಸಲ್ಪಟ್ಟ ಹನೀಫ್ ಶೇಖ್ ಎಂಬ ವ್ಯಕ್ತಿಯು ಮೊಹಮ್ಮದ್ ಹನೀಫ್ ಮತ್ತು ಹನೀಫ್ ಹುದಾಯಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ. 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು 2002ರಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು.

ದೇಶದ್ರೋಹದ ಆರೋಪಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಅಪರಾಧಗಳ ಮೇಲೆ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ 2001 ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪೊಲೀಸರ ಪ್ರಕಾರ, ಹನೀಫ್ ಶೇಖ್ ಸಿಮಿ ಅಡಿಯಲ್ಲಿ ಬರುವ ‘ಇಸ್ಲಾಮಿಕ್ ಮೂವ್ ಮೆಂಟ್’ ನಿಯತಕಾಲಿಕದ ಸಂಪಾದಕನಾಗಿದ್ದ. ನಿಷೇಧಿತ ಸಂಘಟನೆಗೆ ಹೆಚ್ಚಿನ ಸದಸ್ಯರನ್ನು ಸೇರಿಸುವಲ್ಲಿ ಭಾಗಿಯಾಗಿದ್ದ. ಅವನ ಗುರುತನ್ನು ಪೊಲೀಸರು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಮತ್ತು ಅವರ ಬಳಿ ಇದ್ದ ಏಕೈಕ ಸುಳಿವು ಪತ್ರಿಕೆಯಲ್ಲಿ ಮುದ್ರಿಸಲಾದ ‘ಹನೀಫ್ ಹುದಾಯಿ’ ಹೆಸರು ಮಾತ್ರ ಆಗಿತ್ತು.

ದೆಹಲಿ ಪೊಲೀಸರ ದಕ್ಷಿಣ ವಲಯ ವಿಶೇಷ ಸೆಲ್ ನಾಲ್ಕು ವರ್ಷಗಳಿಂದ ಹನೀಫ್ ಶೇಖ್ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ