ಚಿನ್ನ ಕದ್ದ ಆರೋಪ: ತೆಲುಗು ಚಿತ್ರನಟಿಯ ಬಂಧನ - Mahanayaka

ಚಿನ್ನ ಕದ್ದ ಆರೋಪ: ತೆಲುಗು ಚಿತ್ರನಟಿಯ ಬಂಧನ

05/03/2024


Provided by

ಚಿನ್ನ ಕದ್ದ ಆರೋಪದಡಿಯಲ್ಲಿ ತೆಲುಗು ಚಿತ್ರ ನಟಿಯನ್ನು ಆಂಧ್ರಪ್ರದೇಶದ ವಿಶಾಖ ಪಟ್ಟಣಂನ ವೈಜಾಗ್ ಪೊಲೀಸರು ಬಂಧಿಸಿದ್ದಾರೆ.
ತೆಲುಗಿನ ಯುವರ್ಸ್ ಲವಿಂಗ್ಲಿ, ದಿ ಟ್ರಿಪ್ ಸಿನಿಮಾ ಸೇರಿದಂತೆ ಹಲವು ಕಿರುಚಿತ್ರಗಳಲ್ಲಿ ನಟಿಸಿರುವ ಸೌಮ್ಯಾ ಶೆಟ್ಟಿ, ಬಂಧಿತ ನಟಿ.

ಭಾರತೀಯ ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವರ ಮನೆಯಲ್ಲಿ ಸೌಮ್ಯಾ ಶೆಟ್ಟಿ ಚಿನ್ನ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆ ಕದ್ದಿರುವ ಸುಮಾರು 74 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ನಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸೌಮ್ಯಾ ಶೆಟ್ಟಿ ಮತ್ತು ಪ್ರಸಾದ್ ಬಾಬು ಅವರ ಮಗಳು ಮೌನಿಕಾ ಗೆಳತಿಯಾರಾಗಿದ್ದು, ಅವರ ಮನೆಗೆ ಆಗಾಗ್ಗೆ ಸೌಮ್ಯಾ ಹೋಗಿಬರುತ್ತಿದ್ದರು. ಅವರ ಪ್ರೀತಿ, ವಿಶ್ವಾಸ ಗಳಿಸಿದ ಬಳಿಕ ಸೌಮ್ಯಾ ಅವರ ಮನೆಯಿಂದ ಸುಮಾರು ಒಂದು ಕೆ.ಜಿ.ಗೂ ಹೆಚ್ಚು ಚಿನ್ನ ಕದ್ದಿದ್ದರು. ಬಳಿಕ ಆಕೆ ಗೋವಾಕ್ಕೆ ಪರಾರಿಯಾಗಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ