ಡಾಬಾದ ಹೊರಗೆ 35 ಸುತ್ತು ಗುಂಡು ಹಾರಿಸಿ ಉದ್ಯಮಿಯ ಕೊಲೆ

ಹರಿಯಾಣದ ಸೋನಿಪತ್ ನ ಡಾಬಾದ ಹೊರಗೆ ಮದ್ಯದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತನನ್ನು ಸುಂದರ್ ಮಲಿಕ್ ಎಂದು ಗುರುತಿಸಲಾಗಿದ್ದು, ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುಲ್ಶನ್ ಧಾಬಾ ಹಿಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸುಂದರ್ ಮಲಿಕ್ ಮೇಲೆ ಬೇಕಾಬಿಟ್ಟಿ ಗುಂಡು ಹಾರಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಶೂಟರ್ ಗಳು ಸುಂದರ್ ಮಲಿಕ್ ಮೇಲೆ 35 ಸುತ್ತು ಗುಂಡು ಹಾರಿಸಿದ್ದಾರೆ.
ಹರಿಯಾಣದ ದರೋಡೆಕೋರ ಹಿಮಾಂಶು ಅಲಿಯಾಸ್ ಭಾವು ಎಂಬಾತ ಸುಂದರ್ ಮಲಿಕ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ. ಭಾರತದ ಹೊರಗೆ ನೆಲೆಸಿದ್ದಾನೆ ಎಂದು ನಂಬಲಾದ ಹಿಮಾಂಶು ವಿರುದ್ಧ ಇಂಟರ್ ಪೋಲ್ ಕಳೆದ ವರ್ಷ ರೆಡ್ ನೋಟಿಸ್ ಹೊರಡಿಸಿತ್ತು.
ಸುಂದರ್ ಮಲಿಕ್ ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಹೋಂಡಾ ಸಿಟಿ ಕಾರಿನಿಂದ ಎರಡರಿಂದ ಮೂರು ಜನರು ಹೊರಬರುತ್ತಿರುವುದು ಕಂಡುಬಂದಿದೆ ಎಂದು ಸೋನಿಪತ್‌ನ ಉಪ ಪೊಲೀಸ್ ಆಯುಕ್ತ ಗೌರವ್ ರಾಜ್ಪುರೋಹಿತ್ ಹೇಳಿದ್ದಾರೆ. ಏಳು ಪೊಲೀಸ್ ತಂಡಗಳು ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth