ಜೀವವನ್ನೇ ಕೊಂದ ಭೂ ವಿವಾದ: ಒಬಿಸಿ ನಾಯಕನನ್ನು ಕತ್ತು ಸೀಳಿ ಬರ್ಬರ ಕೊಲೆ - Mahanayaka

ಜೀವವನ್ನೇ ಕೊಂದ ಭೂ ವಿವಾದ: ಒಬಿಸಿ ನಾಯಕನನ್ನು ಕತ್ತು ಸೀಳಿ ಬರ್ಬರ ಕೊಲೆ

11/03/2024


Provided by

ಓಂ ಪ್ರಕಾಶ್ ರಾಜ್ ಭರ್ ಅವರ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಸ್ಥಳೀಯ ನಾಯಕಿ ನಂದಿನಿ ರಾಜ್ಭರ್ ಅವರನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಜಮೀನಿನ ವಿವಾದದ ವೇಳೆ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯೊಳಗೆ ಈ ಕೊಲೆಯನ್ನು ಮಾಡಲಾಗಿದೆ.
ಕೊಲೆ ಪ್ರಕರಣದಲ್ಲಿ ಪೊಲೀಸರು ಐವರನ್ನು ಆರೋಪಿಗಳೆಂದು ಹೆಸರಿಸಿದ್ದು, ಅವರಲ್ಲಿ ಆನಂದ್ ಯಾದವ್, ಧ್ರುವ್ ಚಂದ್ರ ಯಾದವ್ ಮತ್ತು ಓರ್ವ ಮಹಿಳೆಯನ್ನು ಬಂಧಿಸಲಾಗಿದೆ‌.

ಮಾಹಿತಿಯ ಪ್ರಕಾರ, ಸ್ಥಳೀಯ ಭೂ ಮಾಫಿಯಾ ನಂದಿನಿ ರಾಜ್ಭರ್ ಅವರ ಪತಿ, ಚಿಕ್ಕಪ್ಪ ಬಾಲಕೃಷ್ಣ ಅವರಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಮತ್ತು ಅದಕ್ಕೆ ಪೂರ್ಣ ಮೊತ್ತವನ್ನು ಪಾವತಿಸದೆ ಅದನ್ನು ನೋಂದಾಯಿಸಿದೆ ಎಂದು ಆರೋಪಿಸಲಾಗಿತ್ತು. ಇದರಿಂದ ಮನನೊಂದ ಬಾಲಕೃಷ್ಣ ಅವರು ಫೆಬ್ರವರಿ 29ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿಯಲ್ಲಿ ಶವ ಪತ್ತೆಯಾಗಿತ್ತು.

ಶ್ರವಣ್ ಯಾದವ್, ಧ್ರುವ್ ಚಂದ್ರ ಯಾದವ್ ಮತ್ತು ಪನ್ನೆ ಲಾಲ್ ಯಾದವ್ ಎಂಬ ಮೂವರು ಭೂ ಮಾಫಿಯಾ ಮಾಡಿದ ವಂಚನೆಯ ವಿರುದ್ಧ ನಂದಿನಿ ರಾಜ್ಭರ್ ಮತ್ತು ಬಾಲಕೃಷ್ಣ ಲಾಬಿ ನಡೆಸಿದ್ದರು. ಪನ್ನೆ ಲಾಲ್ ಯಾದವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ