ಬಿಜೆಪಿ ನಾಯಕರು ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದೇ ಸಂವಿಧಾನದ ಮೇಲಿನ ಗೌರವ ಪ್ರದರ್ಶಿಸಲಿ - Mahanayaka

ಬಿಜೆಪಿ ನಾಯಕರು ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದೇ ಸಂವಿಧಾನದ ಮೇಲಿನ ಗೌರವ ಪ್ರದರ್ಶಿಸಲಿ

ananth kumar hegde
11/03/2024


Provided by

ಪದೇ ಪದೇ ಸಂವಿಧಾನದ ಬಗ್ಗೆ ಕೇವಲವಾಗಿ ಮಾತನಾಡುತ್ತಾ, ದೇಶದ ಗೌರವಕ್ಕೆ ಅಪಮಾನ ಉಂಟು ಮಾಡುತ್ತಿರುವ ಸಂಸದ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡದೇ ತನ್ನ ದೇಶಪ್ರೇಮ, ಸಂವಿಧಾನದ ಬದ್ಧತೆಯನ್ನು ಪ್ರದರ್ಶಿಸಲಿ ಎನ್ನುವ ಆಕ್ರೋಶದ ಮಾತುಗಳು ಸದ್ಯ ಕೇಳಿ ಬರುತ್ತಿದೆ.

ವಿಪಕ್ಷ ನಾಯಕ ಆರ್.ಅಶೋಕ್ ಅವರು ಅನಂತ್ ಕುಮಾರ್ ಹೆಗಡೆಯ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹಾರಿಕೆಯ ಹೇಳಿಕೆಯನ್ನು ನೀಡುವ ಬದಲು, ಇಂತಹ ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದಿರಲು ತಮ್ಮ ಹೈಕಮಾಂಡ್ ಅವರನ್ನು ಒತ್ತಾಯಿಸಲಿ ಎಂದು ವ್ಯಾಪಕವಾಗಿ ಅಭಿಪ್ರಾಯ ಕೇಳಿ ಬಂದಿದೆ.

ಒಂದೆಡೆ ಅನಂತ್ ಕುಮಾರ್ ಅವರಂತಹ ನಾಯಕರನ್ನು ಛೂ ಬಿಟ್ಟು ಸಂವಿಧಾನದ ವಿರುದ್ಧ ಮಾತನಾಡಿಸುವುದು, ಇನ್ನೊಂದೆಡೆಯಲ್ಲಿ ಆರ್.ಅಶೋಕ್ ಅವರಿಂದ ಸಂವಿಧಾನದ ಘನತೆಯ ಬಗ್ಗೆ ಪಾಠ ಮಾಡಿಸುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ. ಹೀಗಾಗಿ ಬಿಜೆಪಿಗೆ ನಿಜವಾಗಿಯೂ ಸಂವಿಧಾನದ ಮೇಲೆ ಗೌರವವಿದ್ದರೆ, ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದೇ ತನ್ನ ದೇಶಪ್ರೇಮ, ಸಂವಿಧಾನ ಪ್ರೇಮವನ್ನು ಪ್ರದರ್ಶಿಸಲಿ ಎನ್ನುವುದೇ ಸದ್ಯದ ಸವಾಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ