ವಿದೇಶಿ ಮಹಿಳೆಯ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್ - Mahanayaka

ವಿದೇಶಿ ಮಹಿಳೆಯ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

arest
16/03/2024

ಬೆಂಗಳೂರು: 27 ವರ್ಷದ ವಿದೇಶಿ ಮಹಿಳೆಯ ಹತ್ಯೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಅಸ್ಸಾಂ ಮೂಲದ ಅಮೃತ್ (22) ಮತ್ತು ರಾಬರ್ಟ್ ಪಿ (26) ಎಂದು ಗುರುತಿಸಲಾಗಿದೆ. ಆರೋಪಿಗಳು ಸ್ಯಾಂಕಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಗಳಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.

ಪ್ರವಾಸಿ ವೀಸಾದಲ್ಲಿ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದ ಉಜ್ಬೇಕಿಸ್ತಾನ್ ಜರೀನಾ ಜೆಪರೋವಾ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮಹಿಳೆ ಚೆಕ್-ಔಟ್ ಸಮಯದ ನಂತರವೂ ಹೊರಗೆ ಬರದ ಕಾರಣ, ಹೋಟೆಲ್ ಸಿಬ್ಬಂದಿಗಳು ಆಕೆಯ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಜರೀನಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಈ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದಲ್ಲಿ ಹೋಟೆಲ್ ಹೌಸ್ ಕೀಪಿಂಗ್ ಸಿಬ್ಬಂದಿ ಕೈವಾಡ ಖಚಿತವಾದ ಕೂಡಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಆದರೆ ಕೃತ್ಯ ಎಸಗಿದ ಬಳಿಕ ಆರೋಪಿಗಳು ಕೇರಳಕ್ಕೆ ಬಸ್ ನಲ್ಲಿ ಪರಾರಿಯಾಗಿದ್ದರೂ ಪೋಲಿಸರು ಕೊನೆಗೂ ಕೇರಳದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಮೃತ ಮಹಿಳೆಯ ತಂಗಿದ್ದ ಕೋಣೆಗೆ ಸ್ವಚ್ಛತೆಗೆ ತೆರಳಿದ್ದರು.ಈ ವೇಳೆ ಆಕೆಯ ಪರ್ಸ ನಲ್ಲಿ ಹಣವಿರುವುದನ್ನು ಗಮನಿಸಿದ ಆರೋಪಿಗಳು ಆಕೆಯ ಹತ್ಯೆಗೆ ನಿರ್ಧರಿಸಿದ್ದರು. ಆದರಂತೆ ಬುಧವಾರ ಮಧ್ಯಾಹ್ನ ಸಿಂಕ್ ಸ್ವಚ್ಛಗೊಳಿಸುವ ನೆಪದಲ್ಲಿ ಜರೀನಾ ಕೋಣೆಗೆ ತೆರಳಿದ್ದಾರೆ. ನಂತರ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ