ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು! - Mahanayaka

ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು!

police
17/03/2024


Provided by

ಬೆಂಗಳೂರು: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು  12.16 ಲಕ್ಷ ರೂಪಾಯಿ ಹಣವನ್ನು ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಮಾಡಲಾಗಿದೆ.

ಉದ್ಯಮಿಯೋರ್ವರು ತಡ ರಾತ್ರಿ ಭಾರೀ ಮೊತ್ತದ ಹಣವನ್ನು ಸಾಗಿಸುತ್ತಿದ್ದು, ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ.

ಹೊಸೂರು ಮೂಲದ ನಾರಾಯಣ್ ಎಂಬ ವ್ಯಕ್ತಿಯಿಂದ ಹಣ ಸೀಜ್ ಮಾಡಲಾಗಿದೆ. ಇನ್ನೂ ಇಷ್ಟೊಂದು ಹಣ ಎಲ್ಲಿಂದ ಎಂದು ಪೊಲೀಸರು ವಿಚಾರಣೆ ನಡೆಸಿದ ವೇಳೆ, ತಾನು ಕೋಳಿ ವ್ಯಾಪಾರ ಮಾಡುತ್ತಿದ್ದು, ಅಂಗಡಿಗಳಿಂದ ಕಲೆಕ್ಟ್ ಮಾಡಿಕೊಂಡು ಹೋಗುತ್ತಿರುವುದಾಗಿ  ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಇನ್ನೂ ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೂಡ ದಾಖಲೆ ಇಲ್ಲದ 8 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ