ಕಳ್ಳತನದ ಆರೋಪದಲ್ಲಿ ಬಟ್ಟೆ ಬಿಚ್ಚಿಸಿ ಚೆಕ್ ಮಾಡಿದ ಶಿಕ್ಷಕಿಯರು: ನೊಂದು ಸಾವಿಗೆ ಶರಣಾದ ಬಾಲಕಿ - Mahanayaka

ಕಳ್ಳತನದ ಆರೋಪದಲ್ಲಿ ಬಟ್ಟೆ ಬಿಚ್ಚಿಸಿ ಚೆಕ್ ಮಾಡಿದ ಶಿಕ್ಷಕಿಯರು: ನೊಂದು ಸಾವಿಗೆ ಶರಣಾದ ಬಾಲಕಿ

bagalkote
17/03/2024


Provided by

ಬಾಗಲಕೋಟೆ:  ಕಳ್ಳತನದ ಆರೋಪ ಹೊರಿಸಿದ್ದಲ್ಲದೇ, ಬಾಲಕಿಯನ್ನು ವಿವಸ್ತ್ರಗೊಳಿಸಿದ ವಿಲಕ್ಷಣ ಘಟನೆಯೊಂದು  ಬಾಗಲಕೋಟೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದ್ದು. ಶಿಕ್ಷಕಿಯರ ವರ್ತನೆಯಿಂದ ಅವಮಾನಕ್ಕೊಳಗಾದ ಬಾಲಕಿ ಸಾವಿಗೆ ಶರಣಾದ ಘಟನೆ ನಡೆದಿದೆ.

ದಿವ್ಯಾ ಬಾರಕೇರ(14) ಸಾವಿಗೆ ಶರಣಾದ ಬಾಲಕಿಯಾಗಿದ್ದಾಳೆ. 8ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿ ಮೇಲೆ ಶಿಕ್ಷಕಿಯರು ಕಳ್ಳತನದ ಆರೋಪ ಹೊರಿಸಿದ್ದು, ಕದ್ದ ಹಣವನ್ನು ಚೆಕ್ ಮಾಡಲು ಬಾಲಕಿಯ ಬಟ್ಟೆ ಬಿಚ್ಚಿದ್ದರು ಎಂದು ಆರೋಪಿಸಲಾಗಿದೆ. ಈ ಅವಮಾನ ಸಹಿಸಲಾರದೇ ಬಾಲಕಿ ಸಾವಿಗೆ ಶರಣಾಗಿದ್ದಾಳೆ.

ಮಾರ್ಚ್ 2ರಂದು ಶಿಕ್ಷಕಿಯೊಬ್ಬರ 2 ಸಾವಿರ ರೂಪಾಯಿ ಹಣ ಕಳೆದು ಹೋಗಿತ್ತು. ಕೆಲವು ವಿದ್ಯಾರ್ಥಿಗಳ ಮೇಲೆ ಅನುಮಾನದಲ್ಲಿ ಶಾಲೆಯಲ್ಲಿ ಆಣೆ ಪ್ರಮಾಣ ಮಾಡಿಸಲಾಗಿತ್ತು. ನಂತರ 15ರಂದು ಬಟ್ಟೆ ಬಿಚ್ಚಿಸಿ ಚೆಕ್ ಮಾಡಿದ್ದಾರೆನ್ನಲಾಗಿದೆ. ಇದರಿಂದ ನೊಂದು ಬಾಲಕಿ ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಸ್ಥರು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕಿ ಸಾವಿಗೆ ಶರಣಾಗಿದ್ದರೂ ಕುಟುಂಬಸ್ಥರು ಘಟನೆಯನ್ನು ಮುಚ್ಚಿಟ್ಟಿದ್ದು, ಅಂತ್ಯಸಂಸ್ಕಾರದ ಬಳಿಕ ದೂರು ನೀಡಿದ್ದಾರೆ. ಹೀಗಾಗಿ ಸಾಕ್ಷಿ ನಾಶದ ಹಿನ್ನೆಲೆಯಲ್ಲಿ ಕುಟುಂಬಸ್ಥರ ವಿರುದ್ಧವೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ