10 ಕೋಟಿ ಚುನಾವಣಾ ಬಾಂಡನ್ನು ನಗದೀಕರಿಸಲು ಒತ್ತಾಯ ಮಾಡಿದ್ರಾ ಅರುಣ್ ಜೇಟ್ಲಿ.? ರಿಪೋರ್ಟರ್ಸ್ ಕಲೆಕ್ಟಿವ್ ನಿಂದ ಸ್ಪೋಟಕ ವರದಿ

ಅವಧಿ ಮೀರಿದ 10 ಕೋಟಿ ಬೆಲೆಯ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಕೇಂದ್ರ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಲವಂತಪಡಿಸಿದ್ದರು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿದೆ. ಚುನಾವಣಾ ಬಾಂಡ್‌ಗಳನ್ನು 15 ದಿನ ಅವಧಿಯೊಳಗೆ ನಗದೀಕರಿಸಬೇಕೆಂಬ ನಿಯಮವಿದ್ದರೂ ಈ ಅವಧಿ ಮುಗಿದ ಎರಡು ದಿನಗಳ ನಂತರ ಬಾಂಡ್ ಕೊಂಡೊಯ್ಯಲಾಗಿತ್ತು.
ಅಂದರೆ ಮೇ 23, 2028 ರಂದು 10 ಕೋಟಿ ಮೌಲ್ಯದ ಬಾಂಡ್‌ಗಳನ್ನು ನಗದೀಕರಿಸಲು ಅಜ್ಞಾತ ರಾಜಕೀಯ ಪಕ್ಷಕ್ಕೆ ಎಸ್‌ಬಿಐ ಅನುಮತಿಸಿತ್ತು ಎಂದು ರಿಪೋರ್ಟರ್ಸ್ ಕಲೆಕ್ಟಿವ್ 2019ರಲ್ಲಿಯೇ ಅಧಿಕೃತ ದಾಖಲೆಗಳನ್ನಾಧರಿಸಿ ವರದಿ ಮಾಡಿತ್ತು.
ಆಗ ಆ ಪಕ್ಷ ಯಾವುದೆಂದು ತಿಳಿಯದೇ ಇದ್ದರೂ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ಚುನಾವಣಾ ಆಯೋಗ ಈಗ ಬಹಿರಂಗಪಡಿಸಿರುವ ಮಾಹಿತಿಯಲ್ಲಿ ನಿಯಮ ಉಲ್ಲಂಘಿಸಿ ಅವಧಿ ಮೀರಿದ ನಂತರ ರೂ. 10 ಕೋಟಿ ಮೌಲ್ಯದ ಬಾಂಡ್ ನಗದೀಕರಿಸಿದ ಪಕ್ಷ ಬಿಜೆಪಿ ಎಂದು ತಿಳಿದು ಬಂದಿದೆ.
ನಿಯಮಗಳ ಪ್ರಕಾರ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ 10 ದಿನ ಅವಧಿಯಲ್ಲಿ ಬಾಂಡ್ ಮಾರಾಟಕ್ಕೆ ಅನುಮತಿಸಲಾಗಿದ್ದರೆ 2018ರಲ್ಲಿ ಪ್ರಧಾನಿ ಕಾರ್ಯಾಲಯವು ವಿತ್ತ ಸಚಿವಾಲಯಕ್ಕೆ ತನ್ನದೇ ನಿಯಮಗಳನ್ನು ಮುರಿದು ಕರ್ನಾಟಕ ಚುನಾವಣೆಗಳಿಗೆ ಮುನ್ನ ಬಾಂಡ್ ಮಾರಾಟಕ್ಕೆ ವಿಶೇಷ 10 ದಿನ ಅವಕಾಶ ಕಲ್ಪಿಸಿತ್ತು ಎಂದೂ ವರದಿಯಾಗಿದೆ.
ಇದೇ ರೀತಿ ಗುಜರಾತ್ ವಿಧಾನಸಭಾ ಚುನಾವಣೆಗೆ ಮುಂಚೆ ಡಿಸೆಂಬರ್ 2022ರಲ್ಲಿ ಬಾಂಡ್ ಮಾರಾಟಕ್ಕೆ ವಿಶೇಷ 10 ದಿನಗಳ ಸಮಾಯವಕಾಶ ಕಲ್ಪಿಸಲಾಗಿತ್ತೆಂದೂ ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth