ಫುಡ್‌ ಡೆಲಿವರಿ ಬಾಯ್‌ ನಿಂದ ಯುವತಿಗೆ ಲೈಂಗಿಕ ಕಿರುಕುಳ! - Mahanayaka

ಫುಡ್‌ ಡೆಲಿವರಿ ಬಾಯ್‌ ನಿಂದ ಯುವತಿಗೆ ಲೈಂಗಿಕ ಕಿರುಕುಳ!

food delivery
21/03/2024

ಬೆಂಗಳೂರು: ಫುಡ್‌ ಡೆಲಿವರಿ ಬಾಯ್‌ ವೋರ್ವ ನೀರು ಕೇಳುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ  ಬೆಂಗಳೂರಿನ ಹೆಚ್‌ ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್‌ 17ರಂದು ಫುಡ್‌ ಡೆಲಿವರಿಗಾಗಿ ಮನೆಗೆ ಬಂದಿದ್ದ ಡೆಲಿವರಿ ಬಾಯ್‌ ಆಕಾಶ್‌ ಬಿ. ಎಂಬಾತ ಕುಡಿಯಲು ನೀರು ಕೇಳಿದ್ದು, ನೀರು ತರಲು ಯುವತಿ ಮನೆಯೊಳಗೆ ಹೋಗಲು ನೋಡಿದ ವೇಳೆ ಕೈ ಹಿಡಿದೆಳೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ ಯುವತಿಯ ದೂರಿನನ್ವಯ ಹೆಚ್‌ ಎಎಲ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ.

ಸಂಜೆ 6:30ರ ವೇಳೆಗೆ ಈ ಘಟನೆ ನಡೆದಿದೆ. ಆರೋಪಿ ಯುವತಿಯ ಕೈ ಹಿಡಿದೆಳೆದ ವೇಳೆ, ಆತನನ್ನು ತಳ್ಳಿ ಯುವತಿ ಗಲಾಟೆ ಮಾಡಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 354 a  ಅಡಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ