70ರ ವೃದ್ಧನನ್ನು ಬೆಂಕಿಯಲ್ಲಿ ಸುಟ್ಟು ಹತ್ಯೆಗೆ ಯತ್ನ: ಬೆಚ್ಚಿಬಿದ್ದ ಕಾರಜೋಳ ಗ್ರಾಮಸ್ಥರು
ವಿಜಯಪುರ: 70 ವರ್ಷದ ವೃದ್ಧನನ್ನು ಬೆಂಕಿಯಲ್ಲಿ ಹಾಕಿ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ.
ವೃದ್ಧ ದುಂಡಪ್ಪ ಎಂಬವರು ತನ್ನ ಜಮೀನಿನಲ್ಲಿದ್ದ ಕಬ್ಬಿನ ರವದಿಗೆ ಬೆಂಕಿ ಹಚ್ಚಿದ್ದು, ಈ ವೇಳೆ ಆಕಸ್ಮಿಕವಾಗಿ ಗಾಳಿಯಲ್ಲಿ ಬೆಂಕಿ ಹಾರಿ ಪಕ್ಕದ ಮಲ್ಲಪ್ಪ ಆಸಂಗಿ ಎಂಬಾತನ ಜಮೀನಿನಲ್ಲಿದ್ದ ಮೇವಿನ ಬಣವಿಗೆ ಬೆಂಕಿ ಬಿದ್ದಿತ್ತು.
ಈ ವಿಚಾರವಾಗಿ ದುಂಡಪ್ಪನ ಜೊತೆಗೆ ಮಲ್ಲಪ್ಪ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಮೇವಿನ ಬದಲು ಮೇವು ನೀಡುತ್ತೇನೆ ಅಥವಾ ಸುಟ್ಟು ಹೋದ ಮೇವಿಗೆ ಪರಿಹಾರ ರೂಪದಲ್ಲಿ ಹಣ ನೀಡುತ್ತೇನೆ ಎಂದು ದುಂಡಪ್ಪ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಲ್ಲಪ್ಪ ತನ್ನ ಸಂಬಂಧಿಕ ಹನುಮಂತ ಮಲಘಾಣ ಸೇರಿ ವೃದ್ಧನ ಮೇಲೆ ಹಲ್ಲೆ ನಡೆಸಿದಲ್ಲದೇ, ಮೇವು ಸುಟ್ಟಂತೆಯೇ ನಿನ್ನನ್ನೂ ಸುಡುತ್ತೇವೆ ಎಂದು ಬೆಂಕಿಗೆ ಎತ್ತಿ ಹಾಕಿದ್ದಾರೆ.
ಪರಿಣಮವಾಗಿ ದುಂಡಪ್ಪ ಅವರಿಗೆ ಸುಟ್ಟಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದುಂಡಪ್ಪ ಅವರ ಬೆನ್ನು ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಎಂಬವರನ್ನು ಬಂಧಿಸಲಾದೆ. ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























