ಗ್ಯಾಸ್ ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ಐದು ಮಂದಿ ಸಜೀವ ದಹನ - Mahanayaka

ಗ್ಯಾಸ್ ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ಐದು ಮಂದಿ ಸಜೀವ ದಹನ

21/03/2024


Provided by

ಗೃಹಿಣೀಯರೇ ಎಚ್ಚರ ಎಚ್ಚರ. ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹತ್ತಿ ಒಂದೇ ಕುಟುಂಬದ ಐದು ಮಂದಿ ಬೆಂಕಿಯಲ್ಲಿ ಬೆಂದು ಹೋದ ಘಟನೆ, ರಾಜಸ್ಥಾನದಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಮೂವರು ಮಕ್ಕಳು ಹೀಗೆ ಸಾವಿಗೀಡಾದವರಲ್ಲಿ ಸೇರಿದ್ದಾರೆ.

ಈ ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲವಾದರೂ ಸಿಲಿಂಡರ್ ಗೆ ಬೆಂಕಿ ಹತ್ತಿರುವುದೇ ಘಟನೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿರ್ಲಕ್ಷದಿಂದ ಗ್ಯಾಸ್ ಸಿಲಿಂಡರ್ ಬಳಸಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ. ಇವು ಏನೇ ಇದ್ದರೂ ಪ್ರತಿದಿನ ಗ್ಯಾಸ್ ಬಳಸುವುದರಿಂದ ಸಾಮಾನ್ಯವಾಗಿ ಗೃಹಣಿಯರು ನಿರ್ಲಕ್ಷ್ಯ ತೋರುತ್ತಾರೆ ಈ ಕಾರಣದಿಂದಾಗಿ ಕೆಲವೊಮ್ಮೆ ಆಘಾತಗಳು ಎದುರಾಗುತ್ತವೆ ಎಂದು ಕೂಡ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ