ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ: 102ರ ಅಜ್ಜಿ ಶಿವಮ್ಮ

ಚಿಕ್ಕಮಗಳೂರು: ಪ್ರಧಾನಿ ಮೋದಿಗಾಗಿ ಶತಾಯುಷಿ ಅಜ್ಜಿಯ ಟೆಂಪಲ್ ರನ್ ಮಾಡುತ್ತಿದ್ದು, ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ ಅಂತ ಹೇಳ್ತಾ ಇದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ 102ರ ಅಜ್ಜಿ ಶಿವಮ್ಮ, ಅವರು, ಜೈ ಶ್ರೀರಾಮ್… ದೇಶಕ್ಕೆ ಒಳ್ಳೆದಾಗಬೇಕು, ಮಳೆ–ಬೆಳೆ ಚೆನ್ನಾಗಿ ಆಗಬೇಕು, ಮೋದಿ ಮತ್ತೆ ಪ್ರಧಾನ ಮಂತ್ರಿ ಆಗಬೇಕು ಎನ್ನುತ್ತಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಅಜ್ಜಿ ರಂಭಾಪುರಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದರು. ಮಳೆ-ಬೆಳೆ ಇಲ್ಲ, ದೇಶದ ಜನ ಸಮಸ್ಯೆಯಲ್ಲಿದ್ದಾರೆ, ಕಾಡು ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿವೆ , ದೇಶಕ್ಕೆ ಮೋದಿ ಪ್ರಧಾನಿಯಾದರೆ ಮಳೆ–ಬೆಳೆ ಆಗಿ ದೇಶ ಸುಭಿಕ್ಷವಾಗಿರುತ್ತೆ, ನನ್ನ ಸ್ವಾರ್ಥಕ್ಕಾಗಿ ಏನೂ ಇಲ್ಲ… ಸ್ವಾರ್ಥಕ್ಕೆ ಹೇಳ್ತಿಲ್ಲ ಎಂದು ಅಜ್ಜಿ ಹೇಳಿದ್ದಾರೆ.
ದೇಶ ಚೆನ್ನಾಗಿ ಇರಬೇಕು, ಜನ ಚೆನ್ನಾಗಿ ಇರಬೇಕು ಅಂದ್ರೆ ದೇಶಕ್ಕೆ ಮೋದಿ ಬೇಕು, ದೇವರ ಬಳಿ ನನಗಾಗಿ ಏನನ್ನು ಕೇಳಿಕೊಂಡಿಲ್ಲ, ದೇಶ, ಮೋದಿಗಾಗಿ ಬೇಡಿದ್ದೇನೆ ಎಂದು ಅಜ್ಜಿ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth