ಕಾಂಗ್ರೆಸ್ ಗೆ ಮತ್ತೆ ಹಾರಲು ಮುಂದಾಗಿದ್ದ ಶಿವರಾಮ ಹೆಬ್ಬಾರ್ ಗೆ ಮುಜುಗರ: ಕಾರ್ಯಕರ್ತರಿಂದ ಪ್ರಬಲ ವಿರೋಧ

ಶಿರಸಿ: ಪಕ್ಷದಿಂದ ಪಕ್ಷಕ್ಕೆ ಹಾರುವುದರಲ್ಲಿ ಎಕ್ಸ್ ಫರ್ಟ್ ಎಂದೇ ಖ್ಯಾತಿಯಾಗಿರುವ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಅವರು ಇದೀಗ ಮತ್ತೆ ಕಾಂಗ್ರೆಸ್ ಗೆ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆಯ ಮೇಲೆ ಸೋಮವಾರ ‘ನಮ್ಮ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ’ ಎಂಬ ಪೋಸ್ಟರ್ ಅಂಟಿಸಿ, ಕೆಲವರು ಅಸಮಾಧಾನ ಹೊರಹಾಕಿರುವುದು ಬಹಿರಂಗಗೊಂಡಿದೆ.
ನಮಗೆ ಕಸ ಬೇಕಾಗಿಲ್ಲ ಎಂಬ ಪೋಸ್ಟರ್ ಶಿರಸಿ ಪಟ್ಟಣದಾದ್ಯಂತ ರಾರಾಜಿಸುತ್ತಿದೆ. ಇದು ಶಿವರಾಮ ಹೆಬ್ಬಾರ್ ಗೆ ಭಾರೀ ಮುಜುಗರ ಉಂಟು ಮಾಡಿದೆ.
ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸ್ಥಳದಲ್ಲೂ ಪೋಸ್ಟರ್ ಗಳು ಪತ್ತೆಯಾಗಿತ್ತು. ಮಾರಿಕಾಂಬಾ ಜಾತ್ರೆಯ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಹೆಬ್ಬಾರ್, ನಾನು ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ. ಯಾರೂ ಯಾವುದೇ ಪಕ್ಷವನ್ನು ಗುತ್ತಿಗೆಗೆ ತೆಗೆದುಕೊಂಡಿಲ್ಲ. ಬಿಜೆಪಿಯಿಂದ ಅಸಮಾಧಾನಗೊಂಡವರು ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್‌ನಲ್ಲಿ ಅತೃಪ್ತರು ಬಿಜೆಪಿ ಸೇರುತ್ತಾರೆ ಎಂದು ಪಕ್ಷದಿಂದ ಪಕ್ಷಕ್ಕೆ ಹಾರುವ ಪದ್ಧತಿಯನ್ನು ಸಮರ್ಥಿಸಿಕೊಂಡರು.
2023 ರ ವಿಧಾನಸಭೆ ಚುನಾವಣೆಯ ಮೊದಲು ಕಾಂಗ್ರೆಸ್ ಆರಂಭಿಸಿದ್ದ “PayCM” ಅಭಿಯಾನದ ಸಂದರ್ಭದಲ್ಲಿ ಆಹಾರ ಕಿಟ್ ಹಗರಣವನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರದೊಂದಿಗೆ ಹೆಬ್ಬಾರ್ ಅವರ ಫೋಟೋ ತೋರಿಸಲಾಗಿದೆ. , “ಡೀಲ್ ನಮ್ಮದು; ಹಣ ನಿಮ್ಮದು ಎಂಬ ಪೋಸ್ಟರ್ ಗಳು ಇದೀಗ ಮತ್ತೆ ಗೋಡೆಗಳಲ್ಲಿ ಕಾಣಿಸಿಕೊಂಡಿದೆ.
ಇನ್ನೂ, ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಪಕ್ಷ ಕಟ್ಟಬೇಕು, ಕೊನೆಯ ಕ್ಷಣದಲ್ಲಿ ಪಕ್ಷಕ್ಕೆ ಹಾರಿ ಸ್ಥಾನಮಾನ ಪಡೆದುಕೊಂಡು ಹೆಬ್ಬಾರ್ ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕಾರ್ಯಕರ್ತರ ಅಸಮಾಧಾನವಾಗಿದೆ. ಆದ್ರೆ, ನಾಯಕರೆಲ್ಲರೂ ‘ಒಂದೇ’ ಎನ್ನುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಸೇರಿದಂತೆ ಹಲವರು ಹೆಬ್ಬಾರ್ ಮರಳಿ ಪಕ್ಷಕ್ಕೆ ಸೇರಬೇಕು ಎಂದು ಬಯಸಿದ್ದಾರೆ. ಅವರು ಮತ್ತೆ ಸೇರಲು ಬಯಸಿದರೆ ಪಕ್ಷಕ್ಕೆ ಸ್ವಾಗತ. ಅವನು ನನ್ನ ಗೆಳೆಯ ಎಂದು ಮಂಕಾಳ್ ವೈದ್ಯ ಹೇಳಿದ್ದಾರೆ. ಹೆಬ್ಬಾರ್ ಅವರಿಗೆ ಬಿಜೆಪಿಯಲ್ಲಿ ನೆಮ್ಮದಿಯಿಲ್ಲದ ಕಾರಣ ಬಿಜೆಪಿಯಲ್ಲಿ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth