ವಿಶೇಷ ಚೇತನ ಯುವತಿ ಜೊತೆ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ಬಳಸಿ, ಹಣ ಪಡೆದು ವಂಚನೆ: ದೂರು ದಾಖಲು - Mahanayaka

ವಿಶೇಷ ಚೇತನ ಯುವತಿ ಜೊತೆ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ಬಳಸಿ, ಹಣ ಪಡೆದು ವಂಚನೆ: ದೂರು ದಾಖಲು

surendra murthi
27/03/2024


Provided by

ಬೆಂಗಳೂರು: ವಿಶೇಷಚೇತನ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದು ಮೋಸ ಮಾಡಿರುವ ಘಟನೆ ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸುರೇಂದ್ರ ಮೂರ್ತಿ ಎಂಬಾತ ವಿಶೇಷಚೇತನ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪಿಯಾಗಿದ್ದಾನೆ.

ಸುರೇಂದ್ರ ಮೂರ್ತಿಯು ಸಂತ್ರಸ್ತೆಯನ್ನು ಪರಿಚಯಮಾಡಿಕೊಂಡು ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಆಕೆಯನ್ನು ಪ್ರೀತಿಸುವ ನಾಟಕವಾಡಿ, ಆಕೆಯ ಬಳಿ ಬ್ಯುಸಿನೆಸ್ ಮಾಡಲು ಹಣ ಪಡೆದುಕೊಂಡಿದ್ದಾನೆ.

ಮಾತ್ರವಲ್ಲದೆ ಆಕೆಯನ್ನು ಪ್ರೀತಿಯ ಹೆಸರಿನಲ್ಲಿ ಲೈಂಗಿಕವಾಗಿಯೂ ಬಳಸಿಕೊಂಡಿರುವುದಾಗಿ ವಿಶೇಷ ಚೇತನ ಯುವತಿ ಆರೋಪಿಸಿದ್ದಾರೆ.

ಸದ್ಯ ಯುವತಿ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ