ಕಾಶಿ ದೇಗುಲದ ಪೊಲೀಸ್ರಿಗೆ ಅರ್ಚಕರ ಧಿರಿಸು: ‘ಇದು ಭದ್ರತಾ ಅಪಾಯ’ ಎಂದ ಅಖಿಲೇಶ್ ಯಾದವ್

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಕರ್ತವ್ಯದ ಮೇಲೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಅರ್ಚಕರ ಧಿರಿಸು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರದ ಬದಲು ಬೇರೆ ವಸ್ತ್ರ ತೊಡಲು ಅವಕಾಶ ನೀಡಿದರೆ ಭದ್ರತಾ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಪೊಲೀಸ್ ಕೈಪಿಡಿಯ ಪ್ರಕಾರ, ಪೊಲೀಸ್ ಅಧಿಕಾರಿಗಳು ಅರ್ಚಕರ ರೀತಿ ವಸ್ತ್ರ ತೊಡುವುದು ಸರಿಯೆ? ಇಂತಹ ಆದೇಶ ನೀಡಿರುವವರನ್ನು ಅಮಾನತುಗೊಳಿಸಬೇಕು. ಒಂದು ವೇಳೆ ನಾಳೆ ಯಾರಾದರೂ ವಂಚಕನು ಇದರ ಲಾಭ ಪಡೆದು ಮುಗ್ಧ ಜನರನ್ನು ಲೂಟಿ ಮಾಡಿದರೆ, ಉತ್ತರ ಪ್ರದೇಶ ಸರಕಾರ ಹಾಗೂ ಆಡಳಿತವು ಏನು ಉತ್ತರ ನೀಡುತ್ತದೆ? ಇದು ಖಂಡನೀಯ!” ಎಂದು ಟೀಕಿಸಿದ್ದಾರೆ. ಪುರುಷ ಪೊಲೀಸ್ ಅಧಿಕಾರಿಗಳು ಪಂಚೆ ಹಾಗೂ ಕುರ್ತಾವನ್ನು ತೊಟ್ಟಿದ್ದರೆ, ಮಹಿಳಾ ಪೊಲೀಸ್ ಅಧಿಕಾರಿಗಳು ಸಲ್ವಾರ್ ಕುರ್ತಾ ತೊಟ್ಟಿರುವುದನ್ನು ಕಾಣಬಹುದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth